
ಕಾರವಾರ : ಉತ್ತರ ಕನ್ನಡದಲ್ಲಿ ಜಿಲ್ಲೆಯಲ್ಲಿ ಕರೊನಾ ತೀವ್ರತೆ ಕಡಿಮೆಯಾಗುತ್ತಿರುವುದು, ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ. ಇಂದು ಒಟ್ಟು 10 ಕರೊನಾ ಕೇಸ್ ದಾಖಲಾಗಿದ್ದು, 29 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇಂದು ಐದು ತಾಲೂಕಿನಲ್ಲಿ ಶೂನ್ಯ ಕೇಸ್ ದಾಖಲಾಗಿದೆ.
ಕಾರವಾರ 03, ಅಂಕೋಲಾ 9, ಹೊನ್ನಾವರ 1,ಭಟ್ಕಳ 1, ಶಿರಸಿ 4, ಸಿದ್ದಾಪುರ 0, ಯಲ್ಲಾಪುರ 0, ಮುಂಡಗೋಡ 0, ಹಳಿಯಾಳ 0, ಜೋಯ್ಡಾ 0 ಕೇಸ್ ದೃಢಪಟ್ಟಿದೆ. ಇದೇ ವೇಳೆ, ಕಾರವಾರ 8, ಅಂಕೋಲಾ 3, ಕುಮಟಾ 4, ಹೊನ್ನಾವರ 3, ಭಟ್ಕಳ 1, ಶಿರಸಿ 3, ಸಿದ್ದಾಪುರ 4, ಯಲ್ಲಾಪುರ 2, ಮುಂಡಗೋಡ 0, ಹಳಿಯಾಳ 0, ಜೋಯಡಾದಲ್ಲಿ ಒಬ್ಬರು ಗುಣಮುಖರಾಗಿ ಮನೆಗೆ ಮರಳಿದ್ದಾರೆ.
ಹೊನ್ನಾವರದಲ್ಲಿ ಒಂದು ಕೇಸ್: ಕುಮಟಾದಲ್ಲಿ 0
ಕೋವಿಡ್ ಸಂಖ್ಯೆ ಜಿಲ್ಲೆಯಲ್ಲಿ ಇಳಿಮುಖವಾಗುತ್ತಿದೆ. ಕುಮಟಾ ತಾಲೂಕಿನಲ್ಲಿ ಇಂದು ಯಾವುದೇ ಕೊರೋನಾ ಪ್ರಕರಣಗಳು ಕಂಡುಬ0ದಿಲ್ಲ. ಅದೇ ರೀತಿ ಹೊನ್ನಾವರ ತಾಲೂಕಿನಲ್ಲಿ ಇಂದು ಓರ್ವ ಮಹಿಳೆಯಲ್ಲಿ ಸೊಂಕು ಕಾಣಿಸಿಕೊಂಡಿದೆ. ಹೊನ್ನಾವರ ಪಟ್ಟಣದ ಜೋಗಮಠದ 24 ವರ್ಷದ ಯುವತಿಯಲ್ಲಿ ಸೊಂಕು ಕಾಣಿಸಿಕೊಂಡಿದೆ. ವಿವಿಧ ಆಸ್ಪತ್ರೆಯಲ್ಲಿ ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದರೆ, ಮೂರು ಸೋಂಕಿತರು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್
ಇದನ್ನೂ ಓದಿ: ಪ್ರಮುಖ ಸುದ್ದಿಗಳು
- ಮಾನಿನಿಯರ ಮೋಹದ ಜಾಲಕ್ಕೆ ಬಿದ್ದವರ ನೆರವಿನಿಂದ ಪಾಕಿಸ್ತಾನಕ್ಕೆ ರವಾನೆಯಾಯ್ತೆ ನೌಕಾನಲೆಯ ಗುಪ್ತ ಮಾಹಿತಿ ? NIA ಅಧಿಕಾರಿಗಳ ದಾಳಿ , ಇಬ್ಬರ ಬಂಧನ ?
- ಟ್ಯಾಂಕರ್ ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಬೈಕ್ : ಚಿಕಿತ್ಸೆ ಸ್ಪಂದಿಸದೆ ಸವಾರ ಸಾವು
- ಆಕಸ್ಮಿಕ ಬೆಂಕಿ: ವಾಸದ ಮನೆ ಸುಟ್ಟು ಸಂಪೂರ್ಣ ಭಸ್ಮ
- ಶಿರಕುಳಿಯಲ್ಲಿ ತಲೆ ಎತ್ತಿ ನಿಂತ ಕಾನದೇವಿಯ ಭವ್ಯ ದೇಗುಲ : ಫೆ 18 ರಿಂದ 23 ರ ವರೆಗೆ ಲೋಕಾರ್ಪಣೆ ಮತ್ತು ಶಿಲಾ ವಿಗ್ರಹ ಪ್ರತಿಷ್ಠಾಪನೆ
- ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಕಾರು