Follow Us On

Google News
Important
Trending

ಅರಣ್ಯಕ್ಕೆ ಹೋದ ವೇಳೆ ಮಹಿಳೆಗೆ ಗುಂಡು ತಗುಲಿದ ಪ್ರಕರಣಕ್ಕೆ ಟ್ಟಿಸ್ಟ್: ಪತಿಯೇ ಅರೆಸ್ಟ್

ಪತ್ನಿಗೆ ಗುಂಡು ಹಾರಿಸಿದ ಪತಿ
ತನಿಖೆಯಲ್ಲಿ ಬಯಲಾಯ್ತು ಗಂಡನ ಮುಖವಾಡ
ಗಂಡನೇ ಹೆಂಡತಿಗೆ ಗುಂಡುಹಾರಿಸಿದ್ಯಾಕೆ?

ಕಾರವಾರ: ದಂಪತಿಗಳು ಕಟ್ಟಿಗೆ ತರಲು ಹೋದ ವೇಳೆ ಮಹಿಳೆಯ ಕೈಗೆ ಗುಂಡು ತಗಲಿದೆ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕದ್ರಾದ ಗೋಯಲ್ ಅರಣ್ಯ ಪ್ರದೇಶದಲ್ಲಿ ನಡೆದಿತ್ತು. ಕಟ್ಟಿಗೆ ತರಲು ಅರಣ್ಯಕ್ಕೆ ತೆರಳಿದ್ದ ಮಹಿಳೆಯ ಕೈಗೆ ಏನೋ ಬಡಿದಂತಾಗಿ ಆಳವಾದ ಗಾಯವಾಗಿತ್ತು. ತಕ್ಷಣ ಪತಿ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದರು. ಈ ಸ್ಕ್ಯಾನ್ ಮಾಡಿ ಪರೀಕ್ಷಿಸಿದಾಗ ಆಕೆ ಕೈ ಒಳಭಾಗದಲ್ಲಿ ಗುಂಡಿನ ಚೂರುಗಳು ಪತ್ತೆಯಾಗಿದೆ. ಕಾಡಿನಲ್ಲಿ ಕಾಡುಪ್ರಾಣಿ ಬೇಟೆಯಾಡುವವರು ಪ್ರಾಣಿ ಎಂದು ಗುಂಡು ಹಾರಿಸಿರುವ ಸಾಧ್ಯತೆಗಳಿವೆ ಎನ್ನುವ ಅನುಮಾನ ಮೂಡಿತ್ತು.


ಆದರೆ, ಈ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ರಸಿಕ ದೇಸಾಯಿ ಎಂಬ ಮಹಿಳೆಗೆ ಗುಂಡು ಹಾರಿಸಿದ ಪ್ರಕರಣವನ್ನು ಪೆÇಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ತನಿಖೆಯಲ್ಲಿ ಈ ಘಟನೆಯಲ್ಲಿ ಪತಿಯ ಕೈವಾಡ ಇರುವುದು ಬಹಿರಂಗವಾಗಿದೆ. ಪತ್ನಿಯ ಶೀಲ ಶಂಕಿಸಿದ್ದ ಆಕೆಯ ಗಂಡ ರಮೇಶ್ ದೇಸಾಯಿ ಆರೋಪಿಯಾಗಿದ್ದು , ಆತನನ್ನು ಬಂಧಿಸಿ ಆತನಿಂದ ನಾಡ ಬಂದೂಕು ಹಾಗು ಜೀವಂತ ಬುಲೇಟ್ ಗಳನ್ನು ಪೆÇಲೀಸರು ವಶಕ್ಕೆ ಪಡೆದಿದ್ದಾರೆ.


ವಿಸ್ಮಯ ನ್ಯೂಸ್, ಕಾರವಾರ

[sliders_pack id=”1487″]

Back to top button