ಓಡಿಸಲು ಬಂದ ಗುಂಪಿನ ಮೇಲೆ ರೊಚ್ಚಿಗೆದ್ದ ಆನೆ: ಬೈಕ್ ನ್ನು ಸೊಂಡಿಲಿನಿoದ ದುಡಿ ಕಾಲಿನಿಂದ ತುಳಿದು ಜಖಂಗೊಳಿಸಿದ ಕಾಡಾನೆ
ಮುಂಡಗೋಡ: ಉತ್ತರಕನ್ನಡ ಜಿಲ್ಲೆಯ ಮುಂಡಗೋಡಿನ ಕೆಲವಡೆ ಕಾಡಾನೆ ಉಪಟಳ ಹೆಚ್ಚುತ್ತಿದೆ. ಕಾಡಾನೆಗಳು ಹೊಲ-ಗದ್ದೆಗಳಿಗೆ ಲಗ್ಗೆಯಿಟ್ಟು ಅಪಾರ ಬೆಳೆಹಾನಿ ಮಾಡುತ್ತಿದೆ. ಅಲ್ಲದೆ, ರೈತರ ವಸ್ತುಗಳಿಗೂ ಹಾನಿ ಮಾಡುತ್ತಿದೆ. ಹೌದು, ರೊಚ್ಚಿಗೆದ್ದ ಕಾಡಾನೆಯೊಂದು ತನ್ನನ್ನು ಓಡಿಸಲು ಹೋದವನ ಬೈಕನ್ನು ಜಖಂಗೊಳಿಸಿದ ಘಟನೆ ತಾಲೂಕಿನ ಕಾತೂರ ಅರಣ್ಯ ವಲಯದ ವ್ಯಾಪ್ತಿಯಲ್ಲಿ ನಡೆದಿದೆ. ಈ ಭಾಗದಲ್ಲಿ ಕಳೆದ ಹಲವು ದಿನಗಳಿಂದ ಕಾಡಾನೆಗಳು ಬೀಡುಬಿಟ್ಟಿವೆ.
ಮೂರು ಮರಿ ಆನೆ ಸೇರಿ ಏಳು ಕಾಡಾನೆಗಳು ರೈತರ ಗದ್ದೆಯಲ್ಲಿ ದಾಳಿ ಮಾಡುತ್ತಿರುವಾಗ ಅಲ್ಲಿನ ಭಾಗದ ರೈತರು ಕಟ್ಟಿಗೆಯಿಂದ ಹಾಗೂ ಪಟಾಕಿಗಳನ್ನು ಹಾರಿಸುತ್ತಿದ್ದರು. ಹೀಗೆ ಆನೆಗಳು ಅರಣ್ಯದ ಕಡೆ ಓಡಿಸುವ ಪ್ರಯತ್ನದಲ್ಲಿರುವಾಗ ರಸ್ತೆಯಲ್ಲಿ ಹೊರಟ ಬೈಕ್ ನಲ್ಲಿ ತೆರಳುತ್ತಿದ್ದ ವ್ಯಕ್ತಿಯೊಬ್ಬ ಆನೆಗಳ ಹಿಂಡನ್ನು ಓಡಿಸಲು ಮುಂದಾಗಿದ್ದಾನೆ. ಈ ಕೋಪಗೊಂಡ ಆನೆಗಳು ಕೆಲವರಿಗೆ ಬೆನ್ನು ಹತ್ತಿದೆ. ರಸ್ತೆ ಪಕ್ಕದಲ್ಲಿದ್ದ ಬೈಕನ್ನು ಆನೆಗಳು ಸಿಟ್ಟಿನಿಂದ ಸೊಂಡಿಲಿoದ ದುಡಿ ಕಾಲಿನಿಂದ ತುಳಿದು ಜಖಂಗೊಳಿಸಿವೆ.
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್,