Follow Us On

WhatsApp Group
Important
Trending

ಭೀಕರ ರಸ್ತೆ ಅಪಘಾತ : ಕಾರು ಡಿಕ್ಕಿ ಹೊಡೆದು ಹೊಟೇಲ್ ಮಾಲೀಕ ದುರ್ಮರಣ

ಅಂಕೋಲಾ: ರಾಷ್ಟ್ರೀಯ ಹೆದ್ದಾರಿ ಅಂಕೊಲಾ- ಬಾಳೆಗುಳಿ ಮಧ್ಯೆ ಕೃಷ್ಣಾಪುರ ಕ್ರಾಸ್ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಭಾನುವಾರ ಸಂಜೆ ವೇಳೆ ನಡೆದಿದೆ.

ಅವರ್ಸಾದ ಶಿಲ್ಪಾ ಹೊಟೇಲ್ ಮಾಲಕ ಗಾಂಧಿ ಶೆಟ್ಟಿ (ಸುಧಾಕರ ನಾರಾಯಣ ಶೆಟ್ಟಿ) ಮೃತ ದುರ್ದೈವಿ ಯಾಗಿದ್ದಾನೆ. ,ಮಹಾರಾಷ್ಟ್ರ ನೋಂದಣಿಯ ಕಾರು ಚಾಲಕ ಅಪಘಾತ ಪಡಿಸಿದ್ದು, ಭಯ ಇಲ್ಲವೇ ಇನ್ನಿತರ ಕಾರಣದಿಂದ ವಾಹನ ಸಮೇತ ಪಟನಾ ಸ್ಥಳದಿಂದ ಪರಾರಿಯಾಗಿ,ನಂತರ ಪತ್ತೆಯಾಗಿದ್ದಾನೆ ಎನ್ನಲಾಗಿದೆ.

ಕಾರ್ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರ ಹೆದ್ದಾರಿ ಮಧ್ಯದ ಡಿವೈಡರ್ ಬಳಿ ಸಿಡಿದು ಬಿದ್ದು ಮುಖ ಮತ್ತು ಹಣೆ ಭಾಗಕ್ಕೆ ( ತಲೆಗೆ ತೀವ್ರ ‘ ಪೆಟ್ಟಾಗಿ, ರಕ್ತ ಸ್ರಾವದಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಇದೇ ವೇಳೆ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದ ಶಾಸಕಿ ರೂಪಾಲಿ ನಾಯ್ಕ ತಮ್ಮ ವಾಹನದಿಂದ ಇಳಿದು ಬೈಕ್ ಸವಾರನ ಯೋಗ ಕ್ಷೇಮ ವಿಚಾರಿಸಲು ಮುಂದಾದರಾದರೂ, ಅದಾಗಲೇ ಆತ ಮೃತಪಟ್ಟಿರಬಹುದು ಎಂಬ ಸುದ್ದಿ ಕೇಳಿ ಬೇಸರ ವ್ಯಕ್ತಪಡಿಸಿದರು.

ಮೃತರು , ಬಿಜೆಪಿ ಹಿರಿಯ ಧುರೀಣ ಭಾಸ್ಕರ ನಾರ್ವೇಕರ್ ಇವರ ಮಗಳ ಮಾವನಾಗಿದ್ದರು. ಅಪಘಾತ ನಡೆದ ಸ್ಥಳದಿಂದ ಮೃತದೇಹವನ್ನು ಸಾಗಿಸಲು ಕನಸಿಗದ್ದೆ ಸಾಮಾಜಿಕ ಕಾರ್ಯಕರ್ತರಾದ ಬೊಮ್ಮಯ್ಯ ನಾಯ್ಕ, ಅನಿಲ ಮಹಾಲೆ, ಇತರರು ಸಹಕರಿಸಿದರು.

ಪಿಎಸೈ ಪ್ರವೀಣ ಕುಮಾರ, 112 ತುರ್ತು ವಾಹನ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ, ಪರೀಶೀಲಿಸಿದರು. ಮತ್ತು ಸಂಚಾರ ದಟ್ಟಣೆ ನಿಯಂತ್ರಿಸಿ ಹೆದ್ದಾರಿ ಸುಗಮ ಸಂಚಾರಕ್ಕೆ ಕರ್ತವ್ಯ ನಿರ್ವಹಿಸಿದರು. ಮೃತ ಶೆಟ್ಟಿ ಇವರ ಮಗ , ಸೊಸೆ ಮುಂಬೈಯಲ್ಲಿ ನೆಲೆಸಿದ್ದು, ಅವರು ಬಂದ ನಂತರ ಗಾಂಧಿ ಶೆಟ್ಟಿ ಇವರ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ತಿಳಿದುಬಂದಿದೆ.ಅಪಘಾತದ ಕುರಿತಂತೆ ಮತ್ತಷ್ಟು ಮಾಹಿತಿ ತಿಳಿದುಬರಬೇಕಿದೆ .

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Back to top button