Important
Trending

ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ :ರಿಕ್ಷಾ ಚಾಲಕ ಮಾಲಕರಿಗೆ ಔತಣಕೂಟ, ಉಚಿತ ಸಮವಸ್ತ್ರ ವಿತರಣೆ ಮತ್ತು ರಿಕ್ಷಾ ಪಾಸಿಂಗ್

ಹೊನ್ನಾವರ: ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್, ಬ್ಯಾಗದ್ದೆ, ಶಿರಸಿ ಇವರಿಂದ ಹೊನ್ನಾವರ ತಾಲೂಕಿನ ರಿಕ್ಷಾ ಚಾಲಕ ಮಾಲಕರಿಗೆ ಔತಣಕೂಟ, ಉಚಿತ ಸಸಮವಸ್ತ್ರ ವಿತರಣೆ ಮತ್ತು ರಿಕ್ಷಾ ಪಾಸಿಂಗ್ ಯೋಜನೆಯ ಬೃಹತ್ ಕಾರ್ಯಕ್ರಮವನ್ನು ಇದೇ ಭಾನುವಾರ ಬೆಳಿಗ್ಗೆ 10 ಗಂಟೆಗೆ ಹೊನ್ನಾವರದ ಲಯನ್ಸ್ ಕ್ಲಬ್ ಸಭಾಭವನದಲ್ಲಿ ಆಯೋಜಿಸಲಾಗಿದೆ. ಪ್ರೀತಿಯ ರಿಕ್ಷಾ ಚಾಲಕ, ಮಾಲಕ ಸಹೋದರರೆ, ಬನ್ನಿ, ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ಕುಟುಂಬದ ಸದಸ್ಯರಾಗಿ.. ಜನರ ಕಷ್ಟಕ್ಕೆ ಸ್ಪಂದಿಸುವ ನೀವು ಕಷ್ಟದ ಪರಿಸ್ಥಿತಿಯಲ್ಲಿದ್ದೀರಿ ಎಂಬುದು ನಮ್ಮ ಟ್ರಸ್ಟ್ನ ಗಮನಕ್ಕೆ ಬಂದಿದೆ. ಹೀಗಾಗಿ ನಿಮಗಾಗಿ, ನಿಮ್ಮ ಕುಟುಂಬದವರಿಗಾಗಿ ಪ್ರೀತಿಯ ಔತಣಕೂಟ, ಸಮವಸ್ತ್ರವಿತರಣೆ, ಹಾಗು ಸ್ಪಲ್ಪದಿನ ಮಟ್ಟಿಗೆ ಉಚಿತ ಪಾಸಿಂಗ್ ಯೋಜನೆಯನ್ನು ಪ್ರಾರಂಭಿಸುತ್ತಿದ್ದೇವೆ.ಹಾಗೆಯೇ ಉನ್ನತ ಶಿಕ್ಷಣ ತರಬೇತಿ, ಸಹಾಯಧನ, ವೈದ್ಯಕೀಯ ಸಹಾಯ ಹೀಗೆ ಇನ್ನಷ್ಟು ಯೋಜನೆಯನ್ನು ಅನುಷ್ಠಾನಗೊಳಿಸುವ ಯೋಜನೆ ಇದೆ. ನೀವು ನಮ್ಮ ಕುಟುಂಬದ ಸದಸ್ಯರಾಗಿ, ನಮ್ಮ ಆತಿಥ್ಯ ಸ್ವೀಕರಿಸಿ, ನಮ್ಮ ಟ್ರಸ್ಟ್ ಕುಟುಂಬದ ಫಲಾನುಭವಿ ಸದಸ್ಯರಾಗಬೇಕಾಗಿ ವಿನಂತಿ. ANANTHAMURTHY HEGDE CHARITABLE TRUST
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9448317709

ವಿಸ್ಮಯ ನ್ಯೂಸ್, ಹೊನ್ನಾವರ

Back to top button