ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಪಣಸೋಲಿ ಆನೆ ಕ್ಯಾಂಪಲ್ಲಿ ಚಾಮುಂಡಿ ಆನೆಗೆ ಎರಡನೆ ಹೆಣ್ಣು ಮರಿ ಜನನ

ಜೊಯಿಡಾ: ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಪಣಸೋಲಿ ಆನೆ ಕ್ಯಾಂಪಲ್ಲಿ ಇರುವ ಚಾಮುಂಡಿ ಆನೆಗೆ ಎರಡನೆ ಹೆಣ್ಣು ಮರಿ ಜನನ ಆಗಿದೆ. ಪಣಸೋಲಿಯಲ್ಲಿ ಇರುವ ಆನೆ ಶಿಬಿರದಲ್ಲಿ ಕಳೆದ 8 ವರ್ಷದ ಹಿಂದೆ ಇದೆ ಚಾಮುಂಡಿ ಹೆಣ್ಣು ಮರಿ ಶುಭಾಂಗಿಗೆ ಜನನ ನೀಡಿತ್ತು.. ಈಗ ಮತ್ತೆ ಹೆಣ್ಣು ಮರಿಗೆ ಜನ್ಮ ನೀಡಿದ್ದು ಖುಷಿ ತರುವ ಸಂಗತಿಯಾಗಿದೆ. ಈ ಹೆಣ್ಣು ಮರಿ ಆರೋಗ್ಯವಾಗಿದ್ದು,ಪಣಸೋಲಿ ವಲಯ ಅರಣ್ಯಾಧಿಕಾರಿ ರಶ್ಮಿ ದೇಸಾಯಿ ಮತ್ತು ಸಿಬ್ಬಂದಿಗಳು ಸದ್ಯ ಆನೆಯ ಬಗ್ಗೆ ನಿಗಾ ವಹಿಸಿದ್ದಾರೆ. ಚಾಮುಂಡಿಯನ್ನ ಈ ಹಿಂದೆ ಮೈಸೂರಿನಿಂದ ತರಲಾಗಿದ್ದು,ಸದ್ಯ ಪಣಸೋಲಿಯಲ್ಲಿ ಮೂರು ಆನೆಗಳ ಜೊತೆ ಮತ್ತೋಂದು ಹೆಣ್ಣು ಮರಿ ಸೇರ್ಪಡೆಯಾದಂತಾಗಿದೆ.

ವಿಸ್ಮಯ ನ್ಯೂಸ್, ಜೋಯ್ಡಾ

Exit mobile version