Focus News
Trending

Havaldar : ದನ ತಪ್ಪಿಸಲು ಹೋಗಿ ಬೈಕ್ ನಿಂದ ಬಿದ್ದು ಗಂಭೀರ ಗಾಯಗೊಂಡ ಹವಾಲ್ದಾರ

ಅಂಕೋಲಾ : ಹವಾಲ್ದಾರರೋರ್ವರು ಪೊಲೀಸ್ ಹೊರ ಠಾಣೆಯಿಂದ ಅಂಕೋಲಾ ಕಡೆ ಮರಳುತ್ತಿದ್ದಾಗ, ಅಚಾನಕ್ ಆಗಿ ರಸ್ತೆಗೆ ಅಡ್ಡಲಾಗಿ ಬಂದ ದನ ತಪ್ಪಿಸಲು ಹೋಗಿ, ಆಯತಪ್ಪಿ ಬೈಕ್ ನಿಂದ ಬಿದ್ದರು ಎನ್ನಲಾದ ಘಟನೆ ರಾ.ಹೆ. 63 ರ ತಾಲೂಕಿನ ಬಾಳೇಗುಳಿ ಹತ್ತಿರದ ಬೊಗ್ರಿಬೈಲ್ ಬಳಿ ಸಂಭವಿಸಿದೆ. ರಾಜೇಶ ನಾಯ್ಕ ಎನ್ನುವವರೇ ಗಾಯಗೊಂಡವರಾಗಿದ್ದು, ಅವರು ರವಿವಾರ ಅಚವೆ ಓ .ಪಿ, ಡ್ಯೂಟಿಗೆ ಹೋದವರು ಹೆದ್ದಾರಿ ಮಾರ್ಗವಾಗಿ ಸಂಜೆಯ ವೇಳೆ ಅಂಕೋಲಾ ಕಡೆ ಮರಳುತ್ತಿದ್ದಾಗ ದಾರಿ ಮಧ್ಯೆ ಈ ರಸ್ತೆ ಅಪಘಾತ ಸಂಭವಿಸಿದೆ.

ನಂತರ ಅವರನ್ನು ಅಂಕೋಲಾ ತಾಲೂಕ ಸರ್ಕಾರಿ ಆಸ್ಪತ್ರೆಗೆ ಕರೆತಂದು ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.ಅಂಕೋಲಾ ಪೊಲೀಸ್ ಠಾಣೆಯ ಸಿಪಿಐ ಸಂತೋಷ ಶೆಟ್ಟಿ ತಾಲೂಕ ಆಸ್ಪತ್ರೆಗೆ ಭೇಟಿ ನೀಡಿ ರಾಜೇಶ ನಾಯ್ಕ ಇವರ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದರಲ್ಲದೇ.ಭುಜ ,ಹೊಟ್ಟೆ ಮತ್ತಿತರ ಭಾಗಗಳಿಗೆ ಗಂಭೀರ ಗಾಯಗಳಾಗಿದ್ದರಿಂದ ರಾಜೇಶ್ ನಾಯ್ಕ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಸಾಗಿಸಲು ಸೂಚಿಸಿದರು.ಪಿಎಸ್ಐ ಮತ್ತಿತರರಿದ್ದರು. .ಅಪಘಾತದ ಘಟನೆಯ ಕುರಿತಂತೆ ಮತ್ತು ರಾಜೇಶ್ ನಾಯಕ್ ಅವರ ಸದ್ಯದ ಆರೋಗ್ಯ ಸ್ಥಿತಿಗತಿಗಳ ಕುರಿತು ಹೆಚ್ಚಿನ ಮಾಹಿತಿಗಳು ತಿಳಿದು ಬರಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button