ಅಂಕೋಲಾ ಸಿ.ಪಿ.ಐ ಶೆಟ್ಟಿ, ಪಿ. ಎಸೈ ಪ್ರವೀಣ ವರ್ಗಾವಣೆ: ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ಸ್ಥಳ ಬಿಟ್ಟು ತೆರಳುತ್ತಿರುವ ಸಾಲು ಸಾಲು ಅಧಿಕಾರಿಗಳು
ಅಂಕೋಲಾ: ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ರಾಜ್ಯದ ಹಲವೆಡೆಯ ಪೊಲೀಸ್ ಠಾಣೆಗಳ ಅಧಿಕಾರಿಗಳ ಸಾಲು ಸಾಲು ವರ್ಗಾವಣೆ ಆರಂಭಗೊಂಡಿದೆ. ಇದೇ ವೇಳೆ ಜಿಲ್ಲೆಯ ಕಾರವಾರ , ಮಲ್ಲಾಪುರ, ಗೋಕರ್ಣ, ಕುಮಟಾ, ಅಂಬಿಕಾನಗರ, ದಾಂಡೇಲಿ, ಭದ್ಕಳ ಮತ್ತಿತರೆಡೆಯ ಕೆಲ ಪೊಲೀಸ್ ನಿರೀಕ್ಷಕರು ಮತ್ತು ಉಪನಿರೀಕ್ಷಕರುಗಳ ವರ್ಗಾವಣೆ ಯಾದಿಯೂ ಪ್ರಕಟವಾಗಿದ್ದು , ಅದರಲ್ಲಿ ಅಂಕೋಲಾ ತಾಲೂಕಿನಲ್ಲಿ ಸಿಪಿಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂತೋಷ ಶೆಟ್ಟಿ ಅವರನ್ನು ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕರನ್ನಾಗಿ ವರ್ಗಾಯಿಸಲಾಗಿದ್ದು, ಕಡೂರು ವೃತ್ತ ನಿರೀಕ್ಷಕ ಶಿವಕುಮಾರ್ ಅವರಿಗೆ ಅಂಕೋಲಾ ಪೊಲೀಸ್ ನಿರೀಕ್ಷಕ ಸ್ಥಾನ ಸೂಚಿಸಲಾಗಿದೆ.
ಅಂಕೋಲಾ ಕಾನೂನು ಮತ್ತು ಸುವ್ಯವಸ್ಥೆ ಪಿ.ಎಸ್. ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರವೀಣಕುಮಾರ್ ಅವರನ್ನು ಹೊನ್ನಾವರಕ್ಕೆ ವರ್ಗಾವಣೆ ಮಾಡಲಾಗಿದ್ದು ಅವರ ಸ್ಥಾನಕ್ಕೆ ಕಾರವಾರ ಪಿ.ಎಸ್. ಐ ಕುಮಾರ ಕಾಂಬಳೆ ಅವರನ್ನು ವರ್ಗಾಯಿಸಲಾಗದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ