- ಅಂಕೋಲಾದಲ್ಲಿ ಇವರೆಗೆ 1895 ಗಂಟಲು ದ್ರವ ಸಂಗ್ರಹಣೆ
- 58 ಪರೀಕ್ಷಾ ವರದಿಗಳು ಬಾಕಿ
- ಶುಕ್ರವಾರ 1 ಐ.ಎಲ್.ಐ ಕೇಸ್,ಒಟ್ಟೂ ಸೋಂಕಿತರ ಸಂಖ್ಯೆ 122ಕ್ಕೆ ಏರಿಕೆ
ಅಂಕೋಲಾ : ಕಳೆದೆರಡು ದಿನಗಳಿಂದ ಪಟ್ಟಣ ವ್ಯಾಪ್ತಿಯಲ್ಲಿ ಸತತ ಏರಿಕೆ ಕಂಡ ಕರೊನಾ ಪ್ರಕರಣಗಳ ಸಂಖ್ಯೆ ಹಲವರಲ್ಲಿ ಗಾಬರಿ ಮೂಡಿಸಿತ್ತು. ಮುಲ್ಲಾವಾಡದಲ್ಲಿ ಯಾವುದೇ ಹೊಸ ಪ್ರಕರಣಗಳು ಕಾಣಿಸಿಕೊಳ್ಳದೇ ಸ್ಥಳೀಯರು ಕೊಂಚ ನಿರಾಳವಾಗುವಂತೆ ಮಾಡಿತು.
ಶುಕ್ರವಾರ ಹೊನ್ನೆಕೇರಿಯ 47ರ ಮಹಿಳೆಯೊರ್ವಳಲ್ಲಿ ಸಾಮಾನ್ಯ ಜ್ವರ ಲಕ್ಷಣ (ಐ.ಎಲ್.ಐ)
ಮಾದರಿಯ ಸೋಂಕು ದೃಢಪಟ್ಟಿದೆ ಎನ್ನಲಾಗಿದ್ದು ಒಟ್ಟು ತಾಲೂಕಿನ ಒಟ್ಟು ಸೋಂಕಿತರ ಸಂಖ್ಯೆ 122ಕ್ಕೆ ಏರಿಕೆಯಾಗಿದೆ. ©Copyright reserved by Vismaya tvಕಾರವಾರದಲ್ಲಿ ದಾಖಲಾಗಿರುವ ಒರ್ವ ಸೋಂಕಿತ, ಹೋಮ್ ಐಸೋಲೇಶನ್ ನಲ್ಲಿರುವ ಈರ್ವರು ಮತ್ತು ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆಗೊಳಪಟ್ಟಿರುವ 30 ಸೋಂಕಿತರನ್ನೊಳಗೊಂಡು ಒಟ್ಟು 33 ಪ್ರಕರಣಗಳು ಸಕ್ರೀಯವಾಗಿವೆ. 87 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಮಣಿಪಾಲದಲ್ಲಿ ಒರ್ವ, ಕಾರವಾರ ಕ್ರಿಮ್ಸ್‍ನಲ್ಲಿ ಇನ್ನೊರ್ವ ಕೊನೆಯುಸಿರೆಳೆದಿದ್ದು, ಈರ್ವರು ಸೋಂಕಿತರು ಮೃತಪಟ್ಟಂತಾಗಿದೆ.
ಗಂಟಲು ದ್ರವ ಪರೀಕ್ಷೆ: ತಾಲೂಕಾಸ್ಪತ್ರೆಯ ಪ್ರಯೋಗಾಲಯದಲ್ಲಿಯೇ ಆಂಟಿಜನ್ ಕಿಟ್ ಮೂಲಕ ನಡೆಸಲಾದ 492 ಟೆಸ್ಟ್ ಸಹಿತ, ತಾಲೂಕಿನಲ್ಲಿ ಈವರೆಗೆ ಒಟ್ಟು 1895 ಗಂಟಲು ದ್ರವ ಸಂಗ್ರಹಿಸಿದಂತಾಗಿದ್ದು 58 ಪರೀಕ್ಷಾ ವರದಿಗಳಷ್ಟೇ ಬರಬೇಕಿದೆ. ©Copyright reserved by Vismaya tvಈವರೆಗಿನ ಪರೀಕ್ಷಾ ವರದಿಗಳಲ್ಲಿ 1715 ನೆಗೆಟಿವ್ ಬಂದಿದ್ದು,122 ವರದಿಗಳು ಪಾಸಿಟಿವ್ ಎಂದು ದೃಢಪಟ್ಟಿದೆ.
ಪುರಸಭೆ ವ್ಯಾಪ್ತಿಯಲ್ಲಿ ಸಹಜವಾಗಿಯೇ ನಾನಾ ಕಾರಣಗಳಿಂದ ಜನಜಂಗುಳಿ ಏರ್ಪಡುತ್ತಿದೆ.
ಇದೆ ವೇಳೆ ಪಟ್ಟಣದ ಅತಿ ಹತ್ತಿರದ ಪ್ರದೇಶಗಳಲ್ಲಿಯೇ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು, ಮಧ್ಯವರ್ತಿ ಸ್ಥಳಗಳಲ್ಲಿ ವ್ಯಾಪಾರ ವಹಿವಾಟು ನಡೆಸಿದ್ದವರಿಗೂ, ಕುಟುಂಬದವರ ಸಂಪರ್ಕದಿಂದ ಸೋಂಕು ದೃಢಪಟ್ಟಿರುವುದು ಕೆಲವರ ಆತಂಕಕ್ಕೆ ಕಾರಣವಾಗಿದೆ. ಈ ನಡುವೆ ಸೋಂಕು ದೃಢಪಟ್ಟವರನ್ನು ಆಸ್ಪತ್ರೆಗೆ ಕರೆದೊಯ್ಯಲು, ಕೆಲವೊಮ್ಮೆ ಆರೋಗ್ಯ ಇಲಾಖೆಯವರಿಗೆ ಸಮಸ್ಯೆಯಾಗುತ್ತಿದೆ ಎನ್ನಲಾಗಿದೆ. ಈ ವೇಳೆ ಭೂತ್ ಮತ್ತು ವಾರ್ಡ ಕಮೀಟಿ ಸದಸ್ಯರು ಹೆಚ್ಚಿನ ಜವಬ್ದಾರಿ ನಿಭಾಯಿಸಿ ಆಡಳಿತ ವ್ಯವಸ್ಥೆಯೊಂದಿಗೆ ಸಹಕರಿಸಬೇಕು ಮತ್ತು ಈ ಹಿಂದೆ ಕರೊನಾ ವಿರುದ್ಧ ಸೇನಾನಿಯಂತೆ ಹಗಲಿರುಳು ಶ್ರಮಿಸಿ, ಜನ ಮೆಚ್ಚುಗೆಗೆ ಪಾತ್ರರಾಗಿದ್ದ ಮುಖ್ಯಾಧಿಕಾರಿಗಳು ಈ ಕುರಿತು ಇನ್ನಷ್ಟು ಮನಸ್ಸು ಮಾಡಲೇ ಬೇಕಿದೆ ಎನ್ನುವುದು ಪ್ರಜ್ಞಾವಂತರ ಅನಿಸಿಕೆಯಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ
ಕೇರಳದ ಭಗವತಿ ಜ್ಯೋತಿಷ್ಯರು
ಪ್ರಸಿದ್ಧ ಜ್ಯೋತಿಷ್ಯರು: 9663145459
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೆಲವೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.