Focus NewsImportant

ಕುಮಟಾ ಪುರಸಭೆಯಲ್ಲಿ ಪತ್ರಿಕಾಗೋಷ್ಠಿ: ಸ್ಥಳೀಯ ವಾರ ಪತ್ರಿಕೆಯೊಂದರಲ್ಲಿ ಪ್ರಕಟವಾದ ವರದಿಯ ಕುರಿತಾಗಿ ಸ್ಪಷ್ಟನೆ

ಕಾನೂನು ಕ್ರಮದ ಕುರಿತು ಸುಳಿವು

ಕುಮಟಾ: ಪುರಸಭಾ ವ್ಯಾಪ್ತಿಯಲ್ಲಿನ ಅನಧಿಕೃತ ಹಾಗೂ ಅಕ್ರಮ ಕಟ್ಟಡಗಳ ಕುರಿತಾಗಿ ಪತ್ರಿಕೆಯೊಂದರಲ್ಲಿ ಪುರಸಭೆಯ ಕೌನ್ಸಿಲ್ ಮತ್ತು ಸದಸ್ಯರ ವಿರುದ್ಧ ಪ್ರಕಟವಾದ ವರದಿಯ ಕುರಿತಾಗಿ ಸ್ಪಷ್ಟನೆ ನೀಡಲು ಪುರಸಭೆ ವತಿಯಿಂದ ಇಂದು ಕುಮಟಾ ಪಟ್ಟಣದ ರಥಬೀದಿಯಲ್ಲಿ ಪುರಸಭಾ ಸಭಾಭವನದಲ್ಲಿ ಸುದ್ಧಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತುದೀ ಸಂದರ್ಭದಲ್ಲಿ ಕುಮಟಾ ಪುರಸಭಾ ಮುಖ್ಯಾಧಿಕಾರಿಗಳಾದ ಅಜಯ್ ಭಂಡರ‍್ಕರ್ ಅವರು ಮಾತನಾಡಿ, ಕುಮಟಾ ಪುರಸಭಾ ವ್ಯಾಪ್ತಿಯಲ್ಲಿನ ಅನಧಿಕೃತ ಹಾಗೂ ಅಕ್ರಮ ಕಟ್ಟಡಗಳ ಕುರಿತಾಗಿ ಪ್ರತಿಕೆಯೊಂದರಲ್ಲಿ ಪ್ರಕಟವಾದ ವರದಿಯಿಂದಾಗಿ ಜನರಿಗೆ ತಪ್ಪು ಮಾಹಿತಿ ರವಾನೆಯಾಗುತ್ತಿದ್ದು, ಈ ಕುರಿತಾಗಿ ಸ್ಪಷ್ಣನೆ ನೀಡಿಲು ಈ ಒಂದು ಸುದ್ಧಿಗೋಷ್ಠಿಯನ್ನು ಆಯೋಜಿಸಲಾಗಿದೆ. ಕುಮಟಾ ಪುರಸಭೆ ವ್ಯಾಪ್ತಿಯಲ್ಲಿ ಇದುವರೆಗೆ ಯಾವುದೇ ಅಕ್ರಮ ಕಟ್ಟಡಗಳು ಪತ್ತೆಯಾಗಿಲ್ಲವಾಗಿದೆ.

ಅಂತೆಯೇ ಅನಧಿಕೃತ ಕಟ್ಟಡಕ್ಕ ಸಂಬAಧಿಸಿದAತೆ ಒಟ್ಟೂ 54 ಕಟ್ಟಡಗಳನ್ನು ಪತ್ತೆಹಚ್ಚಲಾಗಿದ್ದು, 54 ಕಟ್ಟಡಗಳ ಪೈಕಿ 52 ಕಟ್ಟಡಗಳು ವಸತಿಯ ಉದ್ಧೇಶದಿಂದ ನಿರ್ಮಿಸಲಾದ ಕಟ್ಟಡವಾಗಿದೆ. ಹಾಗೂ 2 ವಾಣಿಜ್ಯ ಕಟ್ಟಡವಾಗಿದೆ. ಕಾನೂನಿನ ಕೆಲ ಜಟಿಲತೆಯಿಂದಾಗಿ 52 ಕಟ್ಟಡಗಳು ಅನಧಿಕೃತ ಕಟ್ಟಡವಾಗಿ ಉಳಿದುಕೊಂಡಿದ್ದು, ಕರ್ನಾಟಕ ಪುರಸಭೆಯ ಅಧಿನಿಯಮದ 1964 ರ ಕಲಂ 107 ರ ಅಡಿಯಲ್ಲಿ ಈ ಕಟ್ಟಡಗಳ ಮಾಲೀಕರಿಗೆ ದುಪ್ಪಟ್ಟು ತೆರಿಗೆ ವಿಧಿಸಿ, ನಿಯಮಾನುಸಾರ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಅನಧಿಕೃತ ಹಾಗೂ ಅಕ್ರಮ ಕಟ್ಟಡದ ವಿಷಯದಲ್ಲಿ ಕುಮಟಾ ಪುರಸಭೆಯ ಯಾವುದೇ ಸದಸ್ಯರು ಹಾಗೂ ಅಧಿಕಾರಿಗಳ ಶಾಮೀಲು ಇದ್ದುದ್ದೆ ಆದಲ್ಲಿ ಸೂಕ್ತ ಕಾನೂನು ಕ್ರಮಕ್ಕೆ ಪುರಸಭೆ ಬದ್ದವಾಗಿದೆ ಎಂದು ಮಾಹಿತಿ ನೀಡಿದರು.

ಈ ವೇಳೆ ಕುಮಟಾ ಪುರಸಭಾ ಅಧ್ಯಕ್ಷರಾದ ಅನುರಾಧಾ ಬಾಳೇರಿ ಅವರು ಮಾತನಾಡಿ, ಕುಮಟಾ ಪುರಸಭೆ ಕೌನ್ಸಿಲ್ ಹಾಗೂ ಸದಸ್ಯರ ವಿರುದ್ಧ ಪ್ರಕಟವಾದ ವರದಿಯ ವಿಷಯದಲ್ಲಿ ಸರ್ವ ಸದಸ್ಯರು ಈಗಾಗಲೆ ನಮೂನೆ 3 ರ ವಿತರಿಸುವಲ್ಲಿ ಕಾನೂನು ಜಟಿಲತೆ ಕುರಿತು ಸರಕಾರದ ಗಮನಕ್ಕೆ ತರಲಾಗಿದೆ. ವಿನಾ ಕಾರಣ ಈ ವಿಚಾರದಲ್ಲಿ ಗೊಂದಲ ಸೃಷ್ಠಿಸಿ ಸಾರ್ವಜನಿಕರಲ್ಲಿ ತಪ್ಪು ಸಂದೇಶ ಮೂಡಿಸಲಾಗುತ್ತಿದೆ. ಪುರಸಭೆಯ ಘನತೆಗೆ ದಕ್ಕೆ ತರುವದರೊಂದಿಗೆ ಸರ್ವ ಸದಸ್ಯರನ್ನು ಅವಮಾನಿತರನ್ನಾಗಿ ಪತ್ರಿಕೆಯಲ್ಲಿ ಬರೆಯಲಾಗುತ್ತಿದೆ. ಈ ನಿಟ್ಟಿನಲ್ಲಿ ಸರ್ವ ಸದಸ್ಯರು ಸೇರಿ ಪುರಸಭೆಯ ಘನತೆ ಗೌರ ಕಾಪಾಡುವ ನಿಟ್ಟಿನಲ್ಲಿ ಕಾನೂನು ಸಲಹೆ ಪಡೆದು, ಮುಖ್ಯಾಧಿಕಾರಿಗಳಿಗೆ ಅಧಿಕಾರ ನೀಡಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು. ಈ ವೇಳೆ ಕುಮಟಾ ಪುರಸಭೆಯ ಎಲ್ಲಾ ಸದಸ್ಯರುಗಳು ಹಾಜರಿದ್ದರು.

ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ. ಕುಮಟಾ.

Back to top button