Important
Trending

ಕುಮಟಾದ ತಾರಿಬಾಗಿಲಿನಲ್ಲಿ ಅಘನಾಶಿನಿ ಆರತಿ ವಿಶೇಷ ಕಾರ್ಯಕ್ರಮ: ಗಂಗಾ ಆರತಿಯ ರೂಪದಲ್ಲಿ ಎಳು ನಿಮಿಷಗಳ ವಿಷೇಶ ಆರತಿ

ಕುಮಟಾ: ಯುವಾ ಬ್ರಿಗೇಡ್ ಕುಮಟಾ ತಂಡದ ವತಿಯಿಂದ ಕುಮಟಾದ ತಾರಿಬಾಗಿಲಿನಲ್ಲಿ ಅಘನಾಶಿನಿ ನದಿಗೆ ಆರತಿನ್ನು ಮಾಡುವ ಮೂಲಕ ಅಘನಾಶಿನಿ ಆರತಿ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು.ಕುಮಟಾದ ಪಾಪನಾಶಿನಿ ನದಿ ಎಂದು ಕರೆಯುವ ಅಘನಾಶಿನಿ ನದಿಯ ದಡದ ಸುತ್ತ ಮುತ್ತಲು ವಿದ್ಯುತ್ ದೀಪಗಳ ಅಲಂಕಾರವನ್ನು ಮಾಡಿ ಭಾರತ ಮಾತೆಯ ಪೂಜೆಯನ್ನು ಮಾಡಿ ಗಂಗಾ ಆರತಿಯ ರೂಪದಲ್ಲಿ ಎಳು ನಿಮಿಷಗಳ ವಿಷೇಶ ಆರತಿಯೊಂದಿಗೆ ಕಾರ್ಯಕ್ರಮ ನಡೆದಿದ್ದು, ಎಲ್ಲರ ಗಮನಸೆಳೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಚಕ್ರವರ್ತಿ ಸೂಲಿಬೆಲೆಯವರು ಮುಂದಿನ ದಿನದಲ್ಲೂ ಕಾರ್ಯಕ್ರಮವನ್ನು ಮಾಡುವಂತೆ ಜನರಿಗೆ ನೀರಿನ ಮಹತ್ವದ ಜೊತೆಗೆ ಶುದ್ದತೆಯ ಬಗ್ಗೆ ತಿಳಿಸಿದರು. ಆದಿಚುಂಚನಗಿರಿ ಕುಮಟಾ ಶಾಖಾಮಠದ ನಿಶ್ಚಲಾನಂದನಾಥ ಸ್ವಾಮೀಜಿಯವರು ಮಿನುಗಾರದ ಜೀವನ ಹಾಗೂ ನದಿಯ ಬಾಂದವ್ಯವನ್ನು ವಿವರಿಸಿದರು. ಅಥಿತಿಗಳಾಗಿ ಆಗಮಿಸಿದ ಎಂ ಆರ್ ಉಪಧ್ಯಾಯ ಅವರು ಭಾರತದ ಸಂಸ್ಕೃತಿಬಗ್ಗೆ ವಿವರಿಸಿದರು. ಕಾರ್ಯಕ್ರಮದ ಪೂರ್ವದಲ್ಲಿ ಊರಿನ ಮಹಿಳೆಯರ ಪೂರ್ಣಕುಂಬದ ಸ್ವಾಗತದೊಂದಿಗೆ ಕಾರ್ಯಕ್ರಮಕ್ಕೆ ಪೂರ್ಣವಾಗುವಂತೆ ಮಾಡಿದ್ದರು.

ಈ ಸಂದರ್ಭದಲ್ಲಿ ಊರಿನ ಗಣೇಶ ಅಂಬಿಗ ಯುವಾ ಬ್ರಿಗೇಡ್ ದಕ್ಷಿಣ ರಾಜ್ಯಸಂಚಾಲಕ ಧರ್ಮಾ ಹೊನ್ನಾರಿ ವಿಭಾಗ ಸಂಚಾಲಕ ಅಣ್ಣಪ್ಪ ನಾಯ್ಕ ,ಜಿಲ್ಲಾ ಸಂಚಾಲಕರಾದ ಸತೀಶ ಪಟಗಾರ, ಜಿಲ್ಲಾ ಸಹ ಸಂಚಾಲಕರಾದ ರಂಜೀತ್ ಸದಸ್ಯರಾದ ಸಂದೀಪ, ಚಿದಾನಂದ, ಗೌರೀಶ, ದೀಪಕ ಹೊನ್ನಾವರ ,ಅಕ್ಷಯ ಶಿರಸಿ, ಲಕ್ಷ್ಮೀಕಾಂತ ಸಚೀನ, ಈಶ್ವರ, ವಿನೋದ,ರವೀಶ,ಗಿರೀಶ,ಕಿರಣ ಇತರರು ಇದ್ದರು.

ವಿಸ್ಮಯ ನ್ಯೂಸ್, ಕುಮಟಾ

Back to top button