Join Our

WhatsApp Group
Important
Trending

ವಿದೇಶಿ ಪ್ರವಾಸಿಗರ ಅಜಾಗರುಕತೆಯಿಂದ ಬೈಕಿಗೆ ಡಿಕ್ಕಿ: ಸ್ಥಳೀಯರಿಬ್ಬರಿಗೆ ಗಂಭೀರ ಗಾಯ: ಆಕ್ರೋಶಗೊಂಡ ಸಾರ್ವಜನಿಕರಿಂದ ವಿದೇಶಿಗರ ಮೇಲೆ ಹಲ್ಲೆ

ತಮ್ಮ ಬೈಕಿಗೆ ತಾವೇ ಬೆಂಕಿ ಹಚ್ಚಿಕೊಂಡರೇ ವಿದೇಶಿಗರು?

ಹೊನ್ನಾವರ : ಎರಡು ಬೈಕ್ ಗಳ ನಡುವೆ ಡಿಕ್ಕಿ ಸಂಭವಿಸಿದ ಘಟನೆ ತಾಲೂಕಿನ ಹಳದೀಪುರ‌ ಸಮೀಪದ ಸುವರ್ಣಗದ್ದೆಯಲ್ಲಿ ನಡೆದಿದ್ದು, ವಿದೇಶಿ ಪ್ರವಾಸಿಗರು ಅತಿವೇಗ ಮತ್ತು ಅಜಾಗರೂಕತೆಯಿಂದ ಅಡ್ಡಾದಿಡ್ಡಿಯಾಗಿ ಬೈಕ್ ಚಲಾಯಿಸಿಕೊಂಡು ಬಂದು ಸ್ಥಳೀಯರು ಸಂಚರಿಸುತ್ತಿದ್ದ ಬೈಕಗೆ ಡಿಕ್ಕಿ ಹೊಡಿದಿದ್ದಾನೆ.

ಬೈಕ್ ನಲ್ಲಿದ್ದ ಸ್ಥಳೀಯರಿಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಇದಲ್ಲದೇ ವಿದೇಶಿಗರು ಸಂಚರಿಸುತ್ತಿದ್ದ ಬೈಕ್ ಅಪಘಾತದ ತೀವ್ರತೆಗೆ ಹೆದ್ದಾರಿಯಲ್ಲೆ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ. ಆದರೆ ಸ್ಥಳೀಯರ ಕೆಲವರ ಪ್ರಕಾರ ಅಪಘಾತದ ಬಳಿಕ ವಿದೇಶಿಗರೆ ತಮ್ಮ ಬೈಕಿಗೆ ಬೆಂಕಿ ಹಚ್ಚಿದ್ದಾರಂತೆ. ಅಪಘಾತದಿಂದ ರೊಚ್ಚಿಗೆದ್ದ ಸ್ಥಳೀಯರು ವಿದೇಶಿ ಬೈಕ್ ಸವಾರರ ಮೇಲೆ ಹಲ್ಲೆ ನಡೆಸಿದ್ದು, ಸ್ಥಳಕ್ಕೆ ಹೊನ್ನಾವರ ಪೊಲೀಸರು ಆಗಮಿಸಿ ಪರಿಸ್ಥಿತಿ ಸಹಜ ಸ್ಥಿತಿಗೆ ತಂದಿದ್ದಾರೆ.

ವಿಸ್ಮಯ ನ್ಯೂಸ್ ಕುಮಟಾ

Back to top button