Follow Us On

WhatsApp Group
Important
Trending

ಒಂದು ತಿಂಗಳ ನವಜಾತ ಗಂಡು ಶಿಶುವಿನ ಪೋಷಕರು ಸಂಪರ್ಕಿಸುವoತೆ ಪ್ರಕಟಣೆ

ಸಿದ್ದಾಪುರ: ಡಿಸೆಂಬರ್ 19ರಂದು ಒಂದು ತಿಂಗಳ ನವಜಾತ ಗಂಡು ಶಿಶು ತಾಲೂಕಿನ ಗುಡ್ಡಕೊಪ್ಪಕ್ಕೆ ಹೋಗುವ ಕಚ್ಚಾರಸ್ತೆಯಲ್ಲಿ ರಟ್ಟಿನ ಬಾಕ್ಸ್ ವೊಂದರಲ್ಲಿ ಪತ್ತೆಯಾಗಿತ್ತು. ಕೆಲವು ಗಂಟೆಗಳ ಮೊದಲು ಜನಿಸಿದ ನವಜಾತ ಶಿಶು, ಸೀಳು ತುಟಿ ಹಾಗೂ ಅಂಗವೈಕಲ್ಯತೆ ಹೊಂದಿರುತ್ತದೆ. ಪ್ರಸ್ತುತಸ್ಥಿತಿಯಲ್ಲಿ ಮಗುವು ಶಿರಸಿ ಸಹಾಯ ಟ್ರಸ್ಟ್ ದತ್ತು ಸಂಸ್ಥೆಯಲ್ಲಿರುತ್ತದೆ.

ಸದರಿ ಶಿಶುವಿನ ಪಾಲಕರು, ಪೋಷಕರು ಇದ್ದಲ್ಲಿ ಸೂಕ್ತ ದಾಖಲೆಗಳೊಂದಿಗೆ ಜಿಲ್ಲಾ ಮಕ್ಕಳ ಘಟಕ, ಕಾರವಾರ ಹಾಗೂ ಸಹಾಯ ಟ್ರಸ್ಟ್, ದತ್ತು ಸ್ವೀಕಾರ ಕೇಂದ್ರ ಶಿರಸಿ ಸದರಿ , ಕಾರವಾರ ಹಾಗೂ ಸಹಾಯ ಟ್ರಸ್ಟ್, ದತ್ತು ಸ್ವೀಕಾರ ಕೇಂದ್ರ ಶಿರಸಿ ಸಂಪರ್ಕಿಸಲು ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08382-220182 8277307688ಗೆ ಸಂಪರ್ಕಿಸಿ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಸ್ಮಯ ನ್ಯೂಸ್, ಕಾರವಾರ

Back to top button