ಕುಮಟಾದಲ್ಲಿ ಇಂದು 10 ಕರೊನಾ ಕೇಸ್ ದಾಖಲು?

ಕೊಡ್ಕಣಿಯಲ್ಲೇ ಮೂರು ಪ್ರಕರಣ ದಾಖಲು
ಕೊಪ್ಪಳಕರವಾಡಿ, ಹೆರವಟ್ಟಾ, ವನ್ನಳ್ಳಿಯಲ್ಲಿ ಸೋಂಕು

[sliders_pack id=”1487″]

ಕುಮಟಾ: ತಾಲೂಕಾ ವ್ಯಾಪ್ತಿಯಲ್ಲಿ ಇಂದು ಒಟ್ಟು 10 ಕರೊನಾ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ. ತಾಲೂಕಿನ ಕೊಪ್ಪಳಕರವಾಡಿಯ 54 ವರ್ಷದ ಪುರುಷ, ಹೆರವಟ್ಟಾದ 94 ವರ್ಷದ ವೃದ್ಧ, ವನ್ನಳ್ಳಿಯ 35 ವರ್ಷದ ಪುರುಷ, ಮಾಸೂರ್ ಕ್ರಾಸ್ ಸಮೀಪದ 61 ವರ್ಷದ ಮಹಿಳೆ, ಕಿಮಾನಿಯ 30 ವರ್ಷದ ಪುರುಷನಲ್ಲಿ ಸೋಂಕು ದೃಢಪಟ್ಟಿದೆ. ©Copyright reserved by Vismaya tv ಹಾಗೂ ಕೊಡ್ಕಣಿಯಲ್ಲಿಯೇ ಇಂದು ಮೂವರು ಸೋಂಕಿತರು ಕಂಡುಬoದಿದ್ದದಾರೆ. ಕೊಡ್ಕಣಿಯ 55 ವರ್ಷದ ಪುರುಷ, ಕೊಡ್ಕಣಿಯ 49 ವರ್ಷದ ಮಹಿಳೆ, ಕೊಡ್ಕಣಿಯ 39 ವರ್ಷದ ಮಹಿಳೆಯಲ್ಲಿ ಪಾಸಿಟಿವ್ ಬಂದಿದೆ. ಗೋಕರ್ಣದಲ್ಲಿಯಲ್ಲಿಯೂ ಕೂಡ 2 ಪ್ರಕರಣ ದಾಖಲಾಗಿದೆ. ಗೋಕರ್ಣದ 29 ವರ್ಷದ ಯುವಕ ಹಾಗೂ ಗೋಕರ್ಣದ 46 ವರ್ಷದ ಪುರುಷನಲ್ಲಿ ಸೋಂಕು ತಗುಲಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಇಂದು ಕಂಡು ಬಂದoತಹ ಎಲ್ಲಾ ಕರೊನಾ ಸೋಂಕಿತರು ಕೂಡ ಈ ಹಿಂದೆ ಸೋಂಕು ತಗುಲಿದ್ದವರ ಪ್ರಾಥಮಿಕ ಸಂಪರ್ಕಕ್ಕೆ ಬಂದವರು ಎಂದು ತಿಳಿದುಬಂದಿದೆ. ಗೋಕರ್ಣದ 29 ವರ್ಷದ ಯುವಕನು ಮಾತ್ರ ಬೆಳಗಾವಿ ಮೂಲದವನು ಎನ್ನಲಾಗಿದೆ.

ಈ ಕುರಿತ ನಿಖರ ಅಂಕಿ-ಸoಖ್ಯೆ ಹೆಲ್ತ್ ಬುಲೆಟಿನ್ ನಲ್ಲಿ ಅಧಿಕೃಗೊಳ್ಳಲಿದೆ. ಅಲ್ಲದೆ, ಹೆಚ್ಚಿನ ಮಾಹಿತಿಯನ್ನು ರಾತ್ರಿ 8.30ಕ್ಕೆ ಪ್ರಸಾರವಾಗುವ ವಿಸ್ಮಯ ನ್ಯೂಸ್ ನಲ್ಲಿ ವೀಕ್ಷಿಸಿ..

ವಿಸ್ಮಯ ನ್ಯೂಸ್, ಯೋಗೀಶ್ ಮಡಿವಾಳ, ಕುಮಟಾ

ಕೇರಳದ ಭಗವತಿ ಜ್ಯೋತಿಷ್ಯರು
ಪ್ರಸಿದ್ಧ ಜ್ಯೋತಿಷ್ಯರು: 9663145459
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೆಲವೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Exit mobile version