ಎರಡು ವರ್ಷಗಳ ಹಿಂದೆ ಮದುವೆ ಮನೆಯಲ್ಲಿ ಕೇಳಿದ್ದ ಗುಂಡಿನ ಸದ್ದು | ಇತರೆ ಪ್ರಕರಣಗಳಲ್ಲಿಯೂ ಆರೋಪಿಯಾಗಿದ್ದವ ಜಿಲ್ಲೆಯಿಂದ ಗಡಿಪಾರು ?
ಅಂಕೋಲಾ : ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಶಾಂತಿ ಮತ್ತುಸುವ್ಯವಸ್ಥೆ ಕಾಪಾಡಲು ಒತ್ತು ಕೊಡುತ್ತಿರುವ ಪೊಲೀಸ್ ಇಲಾಖೆ ಹಲವು ಬಿಗಿ ಕ್ರಮಗಳನ್ನು ಕೈಗೊಳ್ಳುತ್ತಿದೆ.. ತನ್ನಿಮಿತ್ತ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಕೆಲ ಆರೋಪಿತರನ್ನು ಗಡಿಪಾರು ಮಾಡಲು ಮುಂದಾದಂತಿದೆ.
ಕಳೆದ 2 ವರ್ಷಗಳ ಹಿಂದೆ ಜನವರಿ ತಿಂಗಳಲ್ಲಿ ಅಂಕೋಲಾ ತಾಲೂಕಿನ ಅವರ್ಸಾ ಗ್ರಾಮದಲ್ಲಿ,ಮದುವೆ ಸಂಭ್ರಮಕ್ಕೆ ತೆರೆದುಕೊಳ್ಳುತ್ತಿದ್ದ ಮನೆ ಒಂದರ ಮೇಲೆ ಬೆಳಗಾಗುವಷ್ಟರಲ್ಲಿ ಗುಂಡಿನ ಸದ್ದು ಕೇಳಿ ಬಂದು ಭಯದ ವಾತಾವರಣ ಮೂಡಿತ್ತು.ಅದೃಷ್ಟವಶಾತ್ ಯಾವುದೇ ಅಪಾಯವಾಗದೆ ಮಂಗಳಕಾರ್ಯ ಸುಸೂತ್ರವಾಗಿ ನಡೆದಿತ್ತು.
ಈ ಪ್ರಕರಣ ಸೇರಿದಂತೆ ಈ ಹಿಂದಿನ ಇತರೆ ಕೆಲ ಪ್ರಕರಣಗಳಲ್ಲಿ ಆರೋಪಿ ಎನ್ನಲಾದ ವಜ್ರಳ್ಳಿ ಗ್ರಾಮದ ರಾಜೇಶ ಜಿ ಗಾಂವಕರ ಕಳಸದ ಮಕ್ಕಿ ಈತನನ್ನು ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ವಶಕ್ಕೆ ಪಡೆದ ಪೊಲೀಸರು, ಜಿಲ್ಲೆಯಿಂದ ಆತನನ್ನು ಗಡಿಪಾರು ಮಾಡಿ ಪಕ್ಕದ ಜಿಲ್ಲೆಗೆ ಬಿಟ್ಟು ಬಂದಿದ್ದಾರೆ ಎನ್ನಲಾಗಿದೆ.
ಕರ್ನಾಟಕ ಪೊಲೀಸ್ ಕಾಯ್ದೆ 1963 ಕಲಂ 55 (ಎ) ( ಬಿ) ಪ್ರಕಾರ, ಗಡಿಪಾರು ಮಾಡುವ ಕುರಿತು ಜಿಲ್ಲಾ ದಂಡಾಧಿಕಾರಿಗಳ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಸಲಾಗಿತ್ತು ಎನ್ನಲಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ