Focus NewsImportant
Trending

ಕುಮಟಾದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ: ಮುಖ್ಯಮಂತ್ರಿಗಳಿoದ ಬಜೆಟ್‌ನಲ್ಲಿ ಘೋಷಣೆ

ಕುಮಟಾ: ಕೊನೆಗೂ ಉತ್ತರ ಕನ್ನಡ ಜಿಲ್ಲೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಭಾಗ್ಯ ಕೂಡಿ ಬಂದಿದ್ದು, ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಬಜೆಟ್ ನಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಘೋಷಣೆ ಮಾಡಿದ್ದಾರೆ. ಹೌದು….ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಬೇಕೆಂಬುದು ಜಿಲ್ಲೆಯ ಜನತೆಯ ಅನೇಕ ವರ್ಷದ ಬೇಡಿಕೆಯಾಗಿದ್ದು, ಈ ಕುರಿತಾಗಿ ಅನೇಕ ಹೋರಾಟಗಳು, ವಿವಿಧ ಅಭಿಯಾನಗಳು ನಡೆದಿದೆ. ಆದರೆ ಇದುವರೆಗೆ ಜನರ ಕೂಗಿನಂತೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುವ ಕಾರ್ಯ ಸರ್ಕಾರದ ವತಿಯಿಂದ ಆಗಿರಲಿಲ್ಲ. ಕಳೆದ ಕೆಲ ತಿಂಗಳ ಹಿಂದೆ ನಡೆದ ಬೀಕರ ಅಂಬ್ಯುಲೇನ್ಸ್ ಅಪಘಾತದ ಬಳಿಕ ಆಸ್ಪತ್ರೆ ನಿರ್ಮಾದ ಕೂಗು ಇನ್ನಷ್ಟು ಜೋರಾದ ಬಳಿಕ ಈ ಕುರಿತಾಗಿ ಕೆಲ ಉತ್ತಮ ಬೆಳವಣಿಗೆಗಳು ಕಂಡು ಬಂದಿದ್ದವು.

ಬೆಳಗಿನ ಜಾವ ಮನೆಯ ಬಾಗಿಲಿಗೆ ಬಂದ ಚಿರತೆ: ಕಂಗಾಲಾಗಿ ಕೂಗಿದ ಮನೆಯ ಮಾಲೀಕ

ಅದರಲ್ಲಿಯೂ ವಿಶೇಷವಾಗಿ ನೋ ಹಾಸ್ಪಿಟಲ್ ನೋ ವೋಟ್ ಎಂವ ಹ್ಯಾಶ್‌ಟ್ಯಾಗ್ ಬಳಸಿ ಟ್ವಿಟರ್ ನಲ್ಲಿ ನಡೆಸಿದ ಬೃಹತ್ ಅಭಿಯಕ್ಕೆ ಆರೋಗ್ಯ ಸಚಿವರು ಸೇರಿದಂತೆ ಅನೇಕರು ಆಸ್ಪತ್ರೆ ನಿರ್ಮಾಣದ ವಿಚಾರವಾಗಿ ಸ್ಪಂದಿಸಿದ್ದರು. ಅದಾದ ಬಳಿಕ ಜಿಲ್ಲೆಯ ಎಲ್ಲಾ ಶಾಸಕರು ಸಹ ವಿಧಾಸಭಾ ಅಧಿವೇಶದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ಬಗ್ಗೆ ಧ್ವನಿ ಎತ್ತಿ, ಜಿಲ್ಲೆಯ ಜನರು ಎದುರಿಸುತ್ತಿರುವ ಸಂಕಷ್ಟವನ್ನು ತೆರೆದಿಟ್ಟಿದ್ದರು. ನಂತರ ಆರೋಗ್ಯ ಸಚಿವರಾದ ಡಾ. ಕೆ. ಸುಧಾಕರ ಅವರು ಜಿಲ್ಲೆಗೆ ಭೇಟಿ ನೀಡಿ ಜಿಲ್ಲೆಯ ಮಧ್ಯವರ್ತಿ ಸ್ಥಳವಾದ ಕುಮಟಾ ತಾಲೂಕಿನ ಮಿರ್ಜಾನ ಭಾಗದಲ್ಲಿ ಗುರುತಿಸಲಾದ ಸ್ಥಳವನ್ನು ಅಧಿಕಾರಿಗಳೊಡನೆ ಪರಿಶೀಲಿಸಿದ್ದರು.

ಇವೆಲ್ಲಾ ಬೆಳವಣಿಗೆಯ ಬಳಿಕ ಇದೀಗ ಬಸವರಾಜ ಬೊಮ್ಮಾಯಿ ಅವರು ಬಜೆಟ್ ನಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಘೋಷಣೆ ಮಾಡಿದ್ದು, ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಆಸ್ಪತ್ರೆ ನಿರ್ಮಾಣ ಮಾಡುವುದಾಗಿ ಘೋಷಿಸಿದ್ದಾರೆ. ಆದರೆ ಆಸ್ಪತ್ರೆ ನಿರ್ಮಾಣದ ಮಾಡುವ ಸ್ಥಳದ ಕುರಿತಾಗಿ ಖಚಿತ ಮಾಹಿತಿ ತಿಳಿದಿಲ್ಲವಾಗಿದೆ. ಹತ್ತಾರು ವರ್ಷಗಳ ಕಾಲ ಈ ಕುರಿತಾಗಿ ಹೋರಾಟಗಳು ನಡೆದಿದ್ದು, ಇದೀಗ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡುವದಾಗಿ ಬಜೆಟ್‌ನಲ್ಲಿ ಘೋಷಣೆ ಮಾಡಿದರುವುದು ಆಶಾದಾಯಕ ಬೆಳವಣಿಗೆ ಹಾಗೂ ಈ ಕುರಿತಾಗಿ ಹೋರಾಟ ನಡೆಸಿದವರಿಗೆ ಸಿಕ್ಕ ಪ್ರತಿಫಲ ಎನ್ನಬಹುದಾಗಿದೆ.

ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ. ಕುಮಟಾ

Back to top button