Join Our

WhatsApp Group
Jannah Theme License is not validated, Go to the theme options page to validate the license, You need a single license for each domain name.
Focus NewsImportant
Trending

ಮನೆಯಿಂದ ಹೊರ ಹೋಗಿ ಕಾಣಿಯಾದ ನಿವೃತ್ತ ಹವಾಲ್ದಾರ : ಕಾರಣವಾಯಿತೇ ಹೆಂಡತಿಯ ತವರು ಮನೆ ಹಣಕಾಸಿನ ವಿಚಾರ ?

ಅಂಕೋಲಾ:  ವ್ಯಕ್ತಿಯೋರ್ವರು ಮನೆಯಿಂದ ಹೊರಗೆ ಹೋದವರು ಮರಳಿ ಬರದೇ ಕಾಣೆಯಾಗಿರುವ ಘಟನೆ ತಾಲೂಕಿನ ಅವರ್ಸಾ ಸಕಲಬೇಣದಲ್ಲಿ ನಡೆದಿದೆ.  ಅವರ್ಸಾ ಸಕಲಬೇಣ ನಿವಾಸಿ ನಿವೃತ್ತ ಹವಲ್ದಾರ ಮಹಾದೇವ ಬೀದಿ ಗಾಂವಕರ್ (69) ನಾಪತ್ತೆಯಾದ ವ್ಯಕ್ತಿಯಾಗಿದ್ದು ಇವರು ಹೆಂಡತಿಯ ತವರು ಮನೆಯ ಹಣಕಾಸಿನ ವಿಷಯ ಮನಸ್ಸಿಗೆ ಹಚ್ಚಿಕೊಂಡು  ಬೇಸರದಿಂದ ಇದ್ದರು ಎನ್ನಲಾಗಿದ್ದುಬುಧವಾರ ಬೆಳಗ್ಗೆ ಅವರ್ಸಾ ಸಕಲಬೇಣದ ಮನೆಯಿಂದ ಹೊರಗೆ ಹೋದವರು ಮರಳಿ ಮನೆಗೆ ಬರದೇ ಕಾಣೆಯಾಗಿರುವುದಾಗಿ ತಿಳಿದು ಬಂದಿದೆ. 

IDBI Bank Recruitment: ಬ್ಯಾಂಕ್ ನಲ್ಲಿ ಉದ್ಯೊಗಾವಕಾಶ: 48 ಸಾವಿರದಿಂದ 89 ಸಾವಿರ ವೇತನ ಶ್ರೇಣಿ

ಗೋದಿ ಮೈಬಣ್ಣ, ದುಂಡನೆ ಮುಖ,ಸದೃಡ ಮೈಕಟ್ಪು ಹೊಂದಿರುವ ವ್ಯಕ್ತಿ ಬಳಿ ತಲೆಕೂದಲು, ಗಡ್ಡ ಮೀಸೆ ಬಿಟ್ಟಿದ್ದು ಮನೆಯಿಂದ ಹೊರಡುವಾಗ ನೀಲಿ ಬಣ್ಣದ ಅರ್ಧ ತೋಳಿನ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದು ಕನ್ನಡ, ಕೊಂಕಣಿ, ಹಿಂದಿ, ಇಂಗ್ಲಿಷ್ ಭಾಷೆ ಮಾತನಾಡಲು ಬಲ್ಲವರಾಗಿದ್ದಾರೆ.ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ವ್ಯಕ್ತಿಯ ಕುರಿತು ಮಾಹಿತಿ ತಿಳಿದು ಬಂದಲ್ಲಿ ಅಂಕೋಲಾ ಪೊಲೀಸ್ ಠಾಣೆ (08388 – 220333 )ಗೆ ಇಲ್ಲಿಲೇ ತಮ್ಮ ಹತ್ತಿರದ ಪೋಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪ್ರಕಟನೆಯಲ್ಲಿ ತಿಳಿಸಲಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button