ಸಾಂಪ್ರದಾಯಿಕ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ನಡೆದ ಜಲ ಅವಘಡ: ನೀರಿನಿಂದ ಮೇಲೆತ್ತಿ ಉಪಚಾರಕ್ಕಾಗಿ ಆಸ್ಪತ್ರೆಗೆ ಕರೆ ತಂದರೂ ಬದುಕುಳಿಯದ ಮೀನುಗಾರ   

ಅಂಕೋಲಾ: ಸಾಂಪ್ರದಾಯಿಕ ಮೀನುಗಾರಿಕೆ ನಡೆಸುತ್ತಿದ್ದ ಮೀನುಗಾರನೋರ್ವ, ಆಕಸ್ಮಿಕವಾಗಿ ದೋಣಿಯಿಂದ ಸಮುದ್ರಕ್ಕೆ ಬಿದ್ದು  ಮೃತ ಪಟ್ಟ ಘಟನೆ ತಾಲೂಕಿನ ಕೇಣಿ ಹರಿಕಂತ್ರವಾಡದಲ್ಲಿ ಸಂಭವಿಸಿದೆ. ಹರಿಕಂತ್ರ ಕೇಣಿ ನಿವಾಸಿ ಚಾಂದು ಹೊನ್ನಪ್ಪ ಹರಿಕಂತ್ರ (56) ಮೃತ ದುಡೈವಿಯಾಗಿದ್ದಾನೆ.  ಬೆಳಿಗ್ಗಿನ ಜಾವ ಮನೆಯ ಸಮೀಪ  ಸಮುದ್ರದಲ್ಲಿ  ಪಾತಿ ದೋಣಿಯಲ್ಲಿ ಸಾಂಪ್ರದಾಯಿಕ ಮೀನುಗಾರಿಕೆಗೆ ನಡೆಸುತ್ತಿದ್ದ ಸಂದರ್ಭದಲ್ಲಿ ಆಯ ತಪ್ಪಿ ದೋಣಿಯಿಂದ ಸಮುದ್ರಕ್ಕೆ ಬಿದ್ದು ನೀರಿನಲ್ಲಿ ಮುಳುಗಿದ್ದ ಎನ್ನಲಾಗಿದೆ.

ಮನೆಯಿಂದ ಹೊರ ಹೋಗಿ ಕಾಣಿಯಾದ ನಿವೃತ್ತ ಹವಾಲ್ದಾರ : ಕಾರಣವಾಯಿತೇ ಹೆಂಡತಿಯ ತವರು ಮನೆ ಹಣಕಾಸಿನ ವಿಚಾರ ?

ಆತನನ್ನು  ನೀರಿನಿಂದ ಮೇಲೆತ್ತಿದ ಸ್ಥಳೀಯರು, ನಂತರ ಉಪಚಾರಕ್ಕಾಗಿ  ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ಕರೆ ತಂದಿದ್ದರು. ಅಲ್ಲಿ ಆತ  ಮೃತ ಪಟ್ಟಿರುವುದಾಗಿ ವೈದ್ಯರು ದೃಡಿಕರಿಸಿರುವುದಾಗಿ  ತಿಳಿದು ಬಂದಿದೆ.  ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನೊಂದ ಬಡ ಮೀನುಗಾರ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಲಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version