Follow Us On

WhatsApp Group
Focus NewsImportant
Trending

ಕರಾವಳಿ ಕಾವಲು ಪಡೆ ಪೊಲೀಸ್ ವಿವೇಕ ನಾಯಕ ನಿಧನ| ಸೈನಿಕನಾಗಿ ಸೇವಾ ನಿವೃತ್ತಿ ಹೊಂದಿದ ಬಳಿಕ ಎರಡನೇ ಬಾರಿ ರಕ್ಷಣಾ ಸಿಬ್ಬಂದಿಯಾಗಿ ಕರ್ತವ್ಯ

ಅಂಕೋಲಾ: ತಾಲೂಕಿನ ಬೆಲೇಕೇರಿಯ ಕರಾವಳಿ ಕಾವಲು ಪಡೆ ಪೊಲೀಸ್ ಠಾಣೆಯಲ್ಲಿ ಕಾನ್ಸಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದ ವಿವೇಕ ಶ್ರೀನಿವಾಸ ಗಾಂವಕರ್ (55) ಅವರು ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ  ನಿಧನರಾದರು. ಭಾರತೀಯ ಸೇನೆಯಲ್ಲಿ ಸೈನಿಕರಾಗಿ  ಸೇವೆ ಸಲ್ಲಿಸಿ ನಿವೃತ್ತಿ ರಾಗಿದ್ದ  ಅವರು ನಂತರ ಪೊಲೀಸ್ ಇಲಾಖೆಯಲ್ಲಿ ಸೇರಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ  ಸೇವೆ ಸಲ್ಲಿಸಿ, ಪ್ರಸ್ತುತ ಬೆಲೇಕೇರಿಯ ಕರಾವಳಿ ಕಾವಲು ಪಡೆಯಲ್ಲಿ  ಕರ್ತವ್ಯ ನಿರ್ವಹಿಸುತ್ತಿದ್ದರು.

ಮೂಲತಃ ಕುಮಟಾ ತಾಲೂಕಿನ ನಾಡು ಮಾಸ್ಕೇರಿಯವರಾದ ಅವರು ಹಾಲಿ ಪಟ್ಟಣದ ಹೊನ್ನೇಕೇರಿ ( ಕೇಣಿಯಲ್ಲಿ) ವಾಸವಾಗಿದ್ದರು. ಮೃತರ ಅಂತ್ಯಕ್ರಿಯೆಯನ್ನು ಹುಟ್ಟೂರು ನಾಡು ಮಾಸ್ಕೇರಿಯಲ್ಲಿ ನಡೆಸಲಾಯಿತು.ಮೃತರು ಪತ್ನಿ,ಮಗ ಮತ್ತು ಮಗಳು ಮತ್ತು ಅಪಾರ ಬಂಧು ಬಳಗ ತೊರೆದಿದ್ದಾರೆ. ಪಚ್ಚು, ಕೃಷ್ಣ ಗಾಂವಕರ, ಸಂದೇಶ, ಕಾರ್ತಿಕ , ಹರೀಶ ನಾಯಕ, ವಿಕಾಸ ನಾಯಕ ಸೇರಿದಂತೆ ಅಂಕೋಲಾ ಹಾಗೂ ಇತರೆಡೆಯ ನೂರಾರು ಗಣ್ಯರು, ಆಪ್ತರು, ಬಂಧು ಬಳಗದವರು ವಿವೇಕ ಗಾಂವಕರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. 

ಬೆಲೇಕೇರಿ ಕರಾವಳಿ ಕಾವಲು ಪಡೆಯ ಉಪ ನಿರೀಕ್ಷಕಿ ಪ್ರಿಯಾಂಕಾ, ಎಎಸ್ಐ ರಾಜು ಆಗೇರ, ಎಚ್ ಸಿ ರಾಮಚಂದ್ರ, ವಾಣಿ ನಾಯಕ, ಮಹಾಬಲೇಶ್ವರ, ದತ್ತ  ಹರಿಕಂತ್ರ, ಚಂದ್ರಕಾಂತ, ಸೀಮಾ ನಾಯಕ, ನಾಗರಾಜ ಗೌಡ,ಮತ್ತಿತರರು ಹಾಗೂ ಕಾರವಾರ ಸಶಸ್ತ್ರ ಪೊಲೀಸ್ ಪಡೆ ಸಿಬ್ಬಂದಿಗಳು ಹಾಜರಿದ್ದು ಗಾಳಿಯಲ್ಲಿ ಗುಂಡು ಹಾರಿಸಿ ಅಗಲಿದ ಸಿಬ್ಬಂದಿಗೆ ಇಲಾಖೆ ಪರವಾಗಿ ಅಂತಿಮ ಗೌರವ ಸಲ್ಲಿಸಿದರು. ಇಲಾಖೆಯ ಅಧಿಕಾರಿಗಳು , ಸಹ ಸಿಬ್ಬಂದಿಗಳು ಸಮಾಜದ ಇತರೇ ಗಣ್ಯರನೇಕರು ವಿವೇಕ ನಾಯಕ ನಿಧನಕ್ಕೆ ತೀವೃ ಸಂತಾಪ ಸೂಚಿಸಿದ್ದಾರೆ. 

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button