ಹಣ್ಣಿನ ವಾಹನದಲ್ಲಿ ದನದ ಮಾಂಸ ಸಾಗಾಟ: ವಾಹನ ತಡೆದು ಚಾಲಕನ ಬಂಧಿಸಿದ ಪೊಲೀಸರು

ಭಟ್ಕಳ: ಶಿರಾಲಿ ಚೆಕ್ ಪೋಸ್ಟ್ ಸಮೀಪ ಅಕ್ರಮವಾಗಿ ಹಣ್ಣಿನ ವಾಹನದಲ್ಲಿ ದನದ ಮಾಂಸ ಸಾಗಾಟ ಮಾಡುವ ವೇಳೆ ವಾಹನ ತಡೆದು ಚಾಲಕನನ್ನು ಬಂಧಿಸಿರುವ ಘಟನೆ ನಡೆದಿದೆ. ಬಂಧಿತ ಆರೋಪಿ, ಮಹ್ಮದ ಸಲಿಂ ಎಂದು ತಿಳಿದು ಬಂದಿದೆ. ಈತ ಹಾನಗಲ್ ಕಡೆಯಿಂದ ಭಟ್ಕಳ ಕಡೆಗೆ ಎಲ್ಲಿಯೋ ಜಾನುವಾರುವನ್ನು ವದೆ ಮಾಡಿಕೊಂಡು ನೀಲಿ ಬಣ್ಣದ ವಾಹನದಲ್ಲಿ 15 ಸಾವಿರ ಮೌಲ್ಯದ 60 ಕೆಜಿ ದನದ ಮಾಂಸವನ್ನು ಮಾರಾಟ ಮಾಡುವ ಉದ್ದೇಶದಿಂದ ತುಂಬಿಕೊoಡು ಸಾಗಾಟ ಮಾಡುತ್ತಿದ್ದ. ಈ ವೇಳೆ ಶಿರಾಲಿ ಚೆಕ್ ಪೋಸ್ಟ್ ನಲ್ಲಿ ವಾಹನವನ್ನು ತಡೆದು ಚಾಲಕನ್ನು ಬಂಧಿಸಿ ವಾಹನವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Exit mobile version