ಕಾನೂನು ಹೋರಾಟಕ್ಕೆ ಮುಂದಾದರೇ ಅಲಗೇರಿ ಗ್ರಾಮಸ್ಥರು?
ಜನಧ್ವನಿಗೆ ಸ್ಪೂರ್ತಿಯ ಬೆಂಬಲ ನೀಡಿದ ಶಿವರಾಮ ಯಾರು?
ಅಂಕೋಲಾ : ಪ್ರಸ್ತಾವಿತ ಅಲಗೇರಿ ವಿಮಾನ ನಿಲ್ದಾಣ ಯೋಜನೆ ಅನುಷ್ಠನಕ್ಕೆ ಸರ್ಕಾರದ ಮಟ್ಟದಲ್ಲಿ ನಾನಾ ರೀತಿಯ ಸಿದ್ಧತೆಗಳು ಚುರುಕುಗೊಳ್ಳುತ್ತಿವೆ. ಈ ನಡುವೆ ತಮ್ಮ ಭೂಮಿ ಸ್ವಾಧೀನ ಪಡಿಸಿಕೊಳ್ಳದೇ, ಯೋಜನೆ ರೂಪಿಸಿ ಎಂದು ಹತ್ತಾರು ಬಾರಿ ಪ್ರತಿಭಟನೆ-ಮನವಿ ಸಲ್ಲಿಸಿದ್ದರೂ, ಗಮನ ಹರಿಸದ ಸರ್ಕಾರದ ನಿಲುವನ್ನು ಖಂಡಿಸಿ, ಸ್ಥಳೀಯರು “ವಿರೋಧಿ ಸಮಿತಿ” ರಚಿಸಿಕೊಂಡು ಕಾನೂನು ಹೋರಾಟಕ್ಕೆ ಮುಂದಾಗುವ ಸೂಚನೆ ನೀಡಿದ್ದಾರೆ.
ಅಲಗೇರಿ ಗ್ರಾಮದ ಈಶ್ವರ ದೇವಾಲಯದಲ್ಲಿ ರವಿವಾರ ಸಾಯಂಕಾಲ ಸಭೆ ನಡೆಸಿ, ವಿಮಾನ ನಿಲ್ದಾಣದ ಯೋಜನೆಗಳ ಸಾಧಕ-ಭಾದಕಗಳ ಕುರಿತು ದೀರ್ಘಚರ್ಚೆ ನಡೆಸಿದ ಗ್ರಾಮಸ್ಥರು, ಯಾವುದೇ ಕಾರಣಕ್ಕೂ ಭೂಮಿ ಬಿಟ್ಟುಕೊಡಬಾರದು ಎಂಬ ತೀರ್ಮಾನಕ್ಕೆ ಬಂದಂತಿದೆ.
ಜಿಲ್ಲೆಯ ಜನಪರ ಹೋರಾಟಗಾರರೆಂದೇ ಗುರುತಿಸಿಕೊಂಡಿರುವ ಶಿವರಾಂ ಗಾಂವಕರ ಖುದ್ದು ಸ್ಥಳಕ್ಕೆ ಆಗಮಿಸಿ, ಗ್ರಾಮಸ್ಥರ ಅಭಿಪ್ರಾಯ ಸಂಗ್ರಹಿಸಿ, ಈ ಹಿಂದಿನ ಜಿಲ್ಲೆಯ ವಿವಿಧ ಯೋಜನೆಗಳಿಂದಾದ ಸಂಕಟದ ಸರಮಾಲೆ ವಿವರಿಸಿ, ತಮ್ಮ ಹರಿತವಾದ ಮಾತುಗಳಿಂದ ಅಲಗೇರಿ ಗ್ರಾಮಸ್ಥರನ್ನುದ್ದೇಶಿಸಿ ಸ್ಪೂರ್ತಿಯ ಮಾತನ್ನಾಡಿದರು.
ಈ ಸಂದರ್ಭದಲ್ಲಿ ಅಲಗೇರಿ-ಬಡಗೇರಿ ಮತ್ತಿತ್ತರ ಗ್ರಾಮದ ಮುಖಂಡರು, ಸ್ಥಳೀಯ ನಾಗರಿಕರು ಪಾಲ್ಗೊಂಡು ಮುಂದಿನ ಹೋರಾಟದ ರೂಪ-ರೇಷೇಗಳ ಕುರಿತು ಚರ್ಚಿಸಿದರು.
ವಿಮಾನ ನಿಲ್ದಾಣ ಮತ್ತಿತ್ತರ ಯಾವುದೇ ಯೋಜನೆಗಳನ್ನು ವಿರೋಧಿಸುವುದು ಸರಿಯಲ್ಲಾ, ಆದರೆ ನಮ್ಮ ಕೃಷಿಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುತ್ತಿರುವುದಕ್ಕೆ ತೀವ್ರ ವಿರೋಧವಿದೆ. ಆಡಳಿತ ಪಕ್ಷದ ಶಾಸಕರು, ಮಂತ್ರಿಗಳು, ಸಂಸದರೇ ಮೊದಲಾದ ಎಲ್ಲಾ ನಾಯಕರು ಅಂಕೋಲಾ-ಹುಬ್ಬಳ್ಳಿ ರೈಲ್ವೆ ಯೋಜನೆ ಜಾರಿ ಮಾಡಿ ತಮ್ಮ ತಾಕತ್ತು ತೋರಿಸಿ – ಶಿವರಾಂ ಗಾಂವಕರ, ಭಾರತೀಯ ಕಿಸಾನ ಸಂಘದ ಜಿಲ್ಲಾಧ್ಯಕ್ಷರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.
ಕೇರಳದ ಭಗವತಿ ಜ್ಯೋತಿಷ್ಯರು
ಪ್ರಸಿದ್ಧ ಜ್ಯೋತಿಷ್ಯರು: 9663145459
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೆಲವೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.