ಆಕಸ್ಮಿಕ ಬೆಂಕಿಯಿಂದ ಹೋಟೇಲ್ ಒಂದು ಹೊತ್ತಿ ಉರಿದು ಲಕ್ಷಾಂತರ ಹಾನಿ ಅಂದಾಜಿಸಲಾಗಿದೆ. ಮಧ್ಯಹ್ನದ ಉರಿ ಬಿಸಿಲಿನಲ್ಲಿ ಈ ಘಟನೆ ನಡೆದಿದ್ದರಿಂದ ಅಗ್ನಿಶಾಮಕದಳ ಹಾಗೂ ಸ್ಥಳೀಯರು ಬೆಂಕಿ ನಂದಿಸಲು ಹರಸಾಹಸ ಪಡುವಂತಾಯಿತು. ಅಂಕೋಲಾ ತಾಲೂಕಿನ ಭಾವಿಕೇರಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಮಂಡದ ಮನೆ ಹತ್ತಿರದ ಪೋಸ್ಟ್ ಆಫೀಸ್ ಎದುರಿನ ಹೋಟೇಲ್ ಒಂದರಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ.
ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಪಿಯು ವಿದ್ಯಾರ್ಥಿನಿ: ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಕೊನೆ ಉಸಿರೆಳೆದ ಯುವತಿ.
ಚಂದ್ರಕಾಂತ ವಿಷ್ಣು ನಾಯ್ಕ ಎನ್ನುವವರಿಗೆ ಸೇರಿದ ಹೊಟೇಲ್ ಇದಾಗಿದ್ದು ಇವರು ಹಲವಾರು ವರ್ಷಗಳಿಂದ ಹೊಟೇಲ್ ವ್ಯವಹಾರ ನಡೆಸಿ ಸಂಸಾರ ನಿಭಾಯಿಸುತ್ತಿದ್ದರು. ಮಧ್ಯಾಹ್ನದ ವೇಳೆ ಇವರು ಹೊಟೇಲ್ ಬಂದ ಮಾಡಿ, ಮನೆಗೆ ಊಟಕ್ಕೆ ತೆರಳಿದ್ದ ವೇಳೆ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದೆ. ಹೊಟೇಲ್ ಅಡುಗೆ ಕೋಣೆ ಒಲೆಯ ಬೆಂಕಿ ಕಿಡಿ ಇಲ್ಲವೇ ಇತರೇ ಕಾರಣಗಳಿಂದ ಹೊಟೇಲನಲ್ಲಿ ಬೆಂಕಿ ಕಾಣಿಸಿಕೊಂಡು ಕ್ರಮೇಣ ಒಳಗಡೆ ಇರುವ ಸಾಮಾನು ಮತ್ತು ಕಟ್ಟಿಗೆ ಮತ್ತಿತರ ವಸ್ತುಗಳಿಗೂ ತಗುಲಿ ,ಹೊತ್ತಿ ಉರಿದಿರುವ ಸಾಧ್ಯತೆ ಕೇಳಿ ಬಂದಿದೆ.
ಕಟ್ಟಡದ ಹಿಂಭಾಗದಲ್ಲಿ ಹೊಗೆ ಹಾಗೂ ಬೆಂಕಿ ಕಂಡ ಸ್ಥಳೀಯರು ಬೆಂಕಿ ನಂದಿಸಲು ಮುಂದಾಗಿದ್ದಾರೆ ಮತ್ತು ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದವರು ಬೆಂಕಿ ನಂದಿಸಲು ಕಾರ್ಯಪ್ರವೃತ್ತರಾದ್ದಾರೆ. ಒಂದೆಡೆ ಹೊಟೇಲ್ ನ ಪರಿಕರಿಗಳು, ಮತ್ತಿತ ರ ಸಾಮಾನು ಹಾಗೂ ಹೊಟೇಲನ ಹಿಂಬಾಗಿಲು, ಮೇಲ್ಚಾವಣಿಗೂ ಬೆಂಕಿ ವ್ಯಾಪಿಸಿ ಧಗಧಗನೆ ಉರಿಯಲಾರಂಭಿಸಿದೆ. ಕಾದ ಹಂಚುಗಳು ಪಟಪಟನೆ ಸಿಡಿಯುವುದು, ರೀಪು ಪಕಾಸಿಗಳು ಸುಟ್ಟು ಮೇಲ್ಲಾವಣೆ ಆಗಾಗ ಕುಸಿಯುವುದು, ಇನ್ನೊಂದೆಡೆ ರಣ ಬಿಸಿಲಿನ ತಾಪಕ್ಕೆ ಸ್ಥಳೀಯರು ಮತ್ತು ಅಗ್ನಿಶಾಮಕ ದಳದವರು ಬೆಂಕಿ ನಂದಿಸಲು ಹರಸಾಹಸ ಪಡುವಂತಾಗಿದೆ. ಅಗ್ನಿ ಅವಘಡಕ್ಕೆ ಕಾರಣ ಹಾಗೂ ಹಾನಿಯ ಅಂದಾಜು ತಿಳಿದು ಬರಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ