Join Our

WhatsApp Group
Important
Trending

ಜಾತ್ರೆಗೆ ಹೋಗಿ ಬರುತ್ತೇನೆ ಎಂದವನು ಗೋವಾದ ಬೀಚ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

ಹೊನ್ನಾವರ: ನಗರೆ ಮಾರಿಮನೆಯ 21 ವರ್ಷದ ಗಗನ್ ರವಿ ನಾಯ್ಕ ಗೋವಾದ ಬೀಚ್ ಒಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ರಾಮನವಮಿ ದಿವಸ ಹೊನ್ನಾವರ ಜಾತ್ರೆಗೆ ಹೋಗುತ್ತೇನೆ ಎಂದು ಮನೆಯಿಂದ ಹೋಗಿದ್ದ. ಅಲ್ಲಿಂದ ಮೂರು ಜನ ಸ್ನೇಹಿತ ರೊಂದಿಗೆ ಮನೆಗೆ ತಿಳಿಸದೆ ಗೋವಾಗೆ ಹೋಗಿದ್ದ ಎನ್ನಲಾಗುತ್ತಿದೆ.

ಉದ್ಯೋಗಾವಕಾಶ:SSLC ಆದವರು ಅರ್ಜಿ ಸಲ್ಲಿಸಿ: 31 ಸಾವಿರ ಆರಂಭಿಕ ವೇತನ

ಗೋವಾ ಹೋದ ಮೇಲೆ ಬೇರೊಂದು ನಂಬರ್ ನಿಂದ ಮನೆಗೆ ಕಾಲ್ ಮಾಡಿ ಸಂಬಂಧಿಕರ ಮನೆಗೆ ಹೋಗುತ್ತೇನೆ ಎಂದು ಹೇಳಿದ್ದಾನೆ ಎಂದು ಸುದ್ದಿ ಕೇಳಿ ಬಂದಿದೆ.ಜೊತೆಗಿದ್ದ ಸ್ನೇಹಿತರು ವಾಪಾಸ್ ಬಂದರು ಈತ ಗೋವಾದಲ್ಲೇ ಇದ್ದ ಎಂದು ಸ್ನೇಹಿತರು ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.

ಮನೆಗೆ ಬಾರದ ಮಗನನ್ನು ಮನೆಯವರು ಹುಡುಕಿ ಹೋದಾಗ ಮೃತ ಪಟ್ಟಿರುವುದು ಬೆಳಕಿಗೆ ಬಂದಿದೆ. ಗೋವಾ ಬಾದ್ ಮೋಲ್ ಬೀಚ್ ನಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದಾನೆ. ಹುಡುಗನ ಸಾವಿಗೆ ಕಾರಣವೇನು? ಜೊತೆಗಿದ್ದ ಸ್ನೇಹಿತರಿಗೆ ಈತ ಹೇಳಿದ್ದು ಏನು..? ನಿಜವಾಗ್ಲೂ ಅಲ್ಲಿ ನಡೆದಿದ್ದೇನು ಎನ್ನುವುದು ತನಿಖೆಯಿಂದ ತಿಳಿದುಬರಬೇಕಿದೆ.

ವಿಸ್ಮಯ ನ್ಯೂಸ್ ಶ್ರೀಧರ್ ನಾಯ್ಕ ಹೊನ್ನಾವರ

Back to top button