Focus NewsImportant
Trending

ಯಾವುದೇ ದಾಖಲೆ ಹಾಗೂ ಬಿಲ್ ಗಳಿಲ್ಲದೆ ಕಾರ್ ನಲ್ಲಿ ಸೀರೆಗಳನ್ನು ಸಾಗಾಟ : 79 ಸೀರೆ ವಶಕ್ಕೆ

ಸಿದ್ದಾಪುರ: ಯಾವುದೇ ದಾಖಲೆ ಹಾಗೂ ಬಿಲ್ ಗಳಿಲ್ಲದೆ ಕಾರ್ ನಲ್ಲಿ ಸೀರೆಗಳನ್ನು ಸಾಗಾಟ ಮಾಡುತ್ತಿದ್ದ ವೇಳೆ ಚೂರಿಕಟ್ಟೆ ಚೆಕ್ ಪೋಸ್ಟ್ ಬಳಿ ಅಧಿಕಾರಿಗಳು 79 ಸೀರೆ ಹಾಗೂ ಕಾರ್ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಅಶ್ವಿನ್ ರಾವುಲ್ ಹುಬ್ಬಳ್ಳಿ ಎನ್ನುವ ವ್ಯಕ್ತಿಯು ತಾಳಗುಪ್ಪ ಕಡೆಯಿಂದ ಸಿದ್ದಾಪುರ ಕಡೆಗೆ ಬರುತ್ತಿದ್ದ ವೇಳೆ ಚೂರಿಕಟ್ಟೆ ಚೆಕ್ ಪೋಸ್ಟ್ ಬಳಿ ಅಧಿಕಾರಿಗಳು ತಪಾಸಣೆ ನಡೆಸಿ ದಾಖಲೆ ಇಲ್ಲದ 45 ಸಾವಿರ ರೂ ಮೌಲ್ಯದ ಸೀರೆಗಳು ಮತ್ತು ಕಿಯಾ ಸ್ಯಾಲಟೋಸ್ ಕಾರ್ ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

ವಿಸ್ಮಯ ನ್ಯೂಸ್, ದಿವಾಕರ ಸಂಪಖoಡ, ಸಿದ್ದಾಪುರ

Back to top button