ಹಳಿಯಾಳ: ಅಂತರ್ ಜಿಲ್ಲಾ ಮತ್ತು ಅಂತರ್ ರಾಜ್ಯ ಬೈಕ್ ಕಳ್ಳರನ್ನು ಬಂಧಿಸಿ, ಆರೋಪಿಗಳಿಂದ 17 ಬೈಕ್ ಗಳನ್ನು ನಗರ ಪೊಲೀಸ್ ಠಾಣಾ ಪೊಲೀಸರು ಜಪ್ತಿಪಡಿಸಿಕೊಂಡಿದ್ದಾರೆ. ಹಳಿಯಾಳ ತಾಲೂಕಿನ ದೇಶಪಾಂಡೆ ನಗರದ ನಿವಾಸಿ, ಹಾಲಿ ಕೋಗಿಲಬನ ಗ್ರಾಮದ ನಿವಾಸಿಯಾಗಿರುವ ಷಾನವಾಜ್ ಯಾನೆ ನವಾಜ್ ಶಬ್ಬೀರ್ ಅಹ್ಮದ್ ಬಸಾಪುರ, ಹಳೆದಾಂಡೇಲಿಯ ನಿವಾಸಿ ಇರ್ಷಾದ್ ಜಾಫರಸಾಬ್ ಚೌಧರಿ ಮತ್ತು ಪಟೇಲ್ ನಗರದ ನಿವಾಸಿ ಮುಸ್ತಾಕ ಅಹ್ಮದ್ ಮುಕ್ತುಂ ಸಾಬ ಮೂಲೆಮನೆ ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ.
ರಾತ್ರಿ ಪೊಲಿಸರು ನಗರದ ಹಳಿಯಾಳ ರಸ್ತೆಯಲ್ಲಿ ವಾಹನಗಳನ್ನು ತಪಾಸಣೆ ಮಾಡುತ್ತಿರುವ ಸಂದರ್ಭದಲ್ಲಿ ಅನುಮಾನಾಸ್ಪದವಾಗಿ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಇಬ್ಬರನ್ನು ತಡೆದು ನಿಲ್ಲಿಸಿ, ವಾಹನದ ಕುರಿತಂತೆ ತಪಾಸಣೆ ನಡೆಸಿದಾಗ ಸಂಬoಧಿತ ದ್ವಿಚಕ್ರ ವಾಹನಕ್ಕೆ ಯಾವುದೇ ದಾಖಲೆಗಳು ಇಲ್ಲದಿದ್ದ ಕಾರಣ, ನಗರ ಠಾಣೆಗೆ ಕರೆದೊಯ್ದು ವಿಚಾರಣೆಯನ್ನು ನಡೆಸಲಾಗಿತ್ತು. ವಿಚಾರಣೆಯಲ್ಲಿ ದ್ವಿಚಕ್ರ ವಾಹನ ಕದ್ದಿದ್ದು ಎನ್ನುವುದು ಬೆಳಕಿಗೆ ಬಂದ ಹಿನ್ನಲೆಯಲ್ಲಿ ಇಬ್ಬರ ಮೇಲೆ ಪ್ರಕರಣವನ್ನು ದಾಖಲಿಸಿ, ತನಿಖೆಯನ್ನು ಕೈಗೊಳ್ಳಲಾಗಿತ್ತು.
ವಿಸ್ಮಯ ನ್ಯೂಸ್ ಯಲ್ಲಾಪುರ