Focus NewsImportant
Trending

ಮೇಲೆ ತರಕಾರಿ ಚೀಲ: ಒಳಗಡೆ ಗೋಮಾಂಸ: ಬೆಳಗಿನ ಜಾವ ಪೊಲೀಸರಿಗೆ ಸಿಕ್ಕಿಬಿದ್ದ ಆರೋಪಿಗಳು

ಕುಮಟಾ: ಇಲ್ಲಿನ ಹೊಳೆಗದ್ದೆ ಟೋಲ್ ಬಳಿ ರಾತ್ರಿ ಹೊತ್ತಿನಲ್ಲಿ ಎಲ್ಲಾ ವಾಹನಗಳ ತಪಾಸಣೆ ನಡೆಸುತ್ತಿರುವ ಕುಮಟಾ ಪೋಲಿಸರು ತಪಾಸಣೆ ವೇಳೆ ಅಪಾರ ಪ್ರಮಾಣದ ಗೋಮಾಂಸವನ್ನು ವಶಪಡಿಸಿಕೊಂಡಿದ್ದಾರೆ. ಬೆಳಗಿನ ಜಾವ ಬೂಲೆರೊ ಪಿಕಪ್ ವಾಹನದಲ್ಲಿ ಖಾನಾಪುರದಿಂದ ಭಟ್ಕಳ ಕಡೆ ಬರುತ್ತಿರುವ ಸಂದರ್ಭದಲ್ಲಿ ತರಕಾರಿ ಚೀಲಗಳನ್ನು ಮೇಲೆ ಇಟ್ಟುಕೊಂಡು ಕೆಳ ಭಾಗದಲ್ಲಿ ಗೋ ಮಾಂಸವನ್ನು ಸಾಗಿಸಲಾಗುತ್ತಿತ್ತು. ವಾಹನವನ್ನು ತಡೆದು ನಿಲ್ಲಿಸಿ ತಪಾಸಣೆ ಮಾಡಿದ ಪೊಲೀಸರು ಪ್ರತಿ ಒಂದು ತರಕಾರಿ ಚೀಲಗಳನ್ನು ತೆಗಿದು ತಪಾಸಣೆ ಮಾಡಿದಾಗ ವಾಹನದಲ್ಲಿ ಗೋ ಮಾಂಸ ಪತ್ತೆ ಆಗಿದೆ.

ವಿಸ್ಮಯ ನ್ಯೂಸ್, ಕುಮಟಾ

Back to top button