Focus News
Trending

ಖಚಿತ ಮಾಹಿತಿ ಮೇರೆಗೆ ವಾಹನ ತಪಾಸಣಿ: 43 ಲೀಟರ್ ಗೋವಾ ಮದ್ಯ ವಶಕ್ಕೆ

ಜೊಯಿಡಾ: ತಾಲೂಕಿನ ಅನಮೋಡ ಗ್ರಾಮದ ಅಬಕಾರಿ ತನಿಖಾ ಠಾಣೆಯ ಮುಂಭಾಗದಲ್ಲಿ ಖಚಿತ ಮಾಹಿತಿ ಮೇರೆಗೆ ವಾಹನ ತಪಾಸಣಿ ಮಾಡುತ್ತಿದ್ದಾಗ 43 ಲೀಟರ್ ಗೋವಾ ಮದ್ಯ ವನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬoಧಉತ್ತರಪ್ರದೇಶದ ಆರೋಪಿ ಮನೋಜ ಕುಮಾರ ಎಂಬುವವರನ್ನು ದಸ್ತಗಿರಿ ಮಾಡಿ ಪ್ರಕರಣ ದಾಖಲಿಸಲಾಗಿದೆ.

ಚುನಾವಣೆಯ ನಿಮಿತ್ತ ಅಬಕಾರಿ ತನಿಖಾಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ ಸಿಬ್ಬಂದಿ ಹಾಗೂ ಎಸ್. ಎಸ್. ಟಿ ತಂದದವರೊoದಿಗೆ ಜಂಟಿಯಾಗಿ ನಡೆಸಿದ ಈ ಅಬಕಾರಿ ದಾಳಿಯಲ್ಲಿ ಅಬಕಾರಿ ಉಪನಿರೀಕ್ಷಕರಾದ ಶ್ರೀಕಾಂತ ಬಿ ಅಸೂದೆ,ಅಬಕಾರಿ ಪೇದೆಗಳಾದ ಆರ್. ವಿ. ಭಟ್ಕಳ, ನಾಗೇಂದ್ರ ಬೋವಿವಡ್ಡರ, ಯು ಎನ್ ತುಳಜಿ,ಪೊಲೀಸ ಪೇದೆಗಳಾದ ಸಂತೋಷ ಲಮಾಣಿ , ಮತ್ತು ಎಸ್. ಎಸ್. ಟಿ ತಂಡದವರಾದ ವಿನೋದ್ ಗಾವಡೆ ಪಾಲ್ಗೊಂಡಿದ್ದರು.

ವಿಸ್ಮಯ ನ್ಯೂಸ್, ಜೋಯ್ಡಾ

Back to top button