Focus News
Trending

ಅಂಕೋಲಾದಲ್ಲಿ ವಿಜಯ ಯಾತ್ರೆ ಹಮ್ಮಿಕೊಳ್ಳಲಿರುವ ಶ್ರೀ ವಿದುಶೇಖರ ಮಹಾಸ್ವಾಮಿ| ವೈಶ್ಯ, ಬಂಟ, ಉಪನಾಡವ ಹಾಗೂ ಕ್ಷತ್ರಿಯ ಕೋಮಾರಪಂಥ ಸಮಾಜದ ಶಿಷ್ಯಂದಿರಿಂದ ವಿವಿಧೆಡೆ ಕಾರ್ಯಕ್ರಮ

ಅಂಕೋಲಾ: ಶೃಂಗೇರಿ ಶ್ರೀಶಾರದಾ ಪೀಠಾದೀಶ ಜಗದ್ಗುರು ಶ್ರೀವಿದುಶೇಖರ ಭಾರತೀ ಮಹಾಸ್ವಾಮಿಗಳ ವಿಜಯಯಾತ್ರೆ ಮೇ1ರಿಂದ ಮೇ3 ರ ವರೆಗೆ ಅಂಕೋಲಾ ತಾಲೂಕಿನಲ್ಲಿ ನಡೆಯಲಿದ್ದು ಈ ಸಂದರ್ಭದಲ್ಲಿ ತಾಲೂಕಿನ ವಿವಿಧ ಕಡೆಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಜಗದ್ಗುರುಗಳು ಸಾನಿಧ್ಯ ವಹಿಸಲಿದ್ಧಾರೆ ಎಂದು ಕಾರ್ಯಕ್ರಮದ ಸ್ವಾಗತ ಸಮಿತಿ ಕಾರ್ಯದರ್ಶಿ ರಾಜೇಂದ್ರ ಎಸ್. ಶೆಟ್ಟಿ ತಿಳಿಸಿದರು.

ದೇವಾಲಯದ ಆವರಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೇ 1 ರಂದು ಸಂಜೆ ಅಂಕೋಲಾಕ್ಕೆ ಆಗಮಿಸಲಿರುವ ವಿಧುಶೇಖರ ಭಾರತಿ ಮಹಾಸ್ವಾಮಿಗಳು ತಾಲೂಕಿನ ಶ್ರೀಆರ್ಯಾದುರ್ಗಾ ಮಹಾಸಂಸ್ಥಾನಕ್ಕೆ ಮೊದಲು ಭೇಟಿ ನೀಡಲಿದ್ದು ನಂತರ ಶ್ರೀಶಾಂತಾದುರ್ಗಾ ದೇವಾಲಯದ ಬಳಿ ತಾಲೂಕಿನ ವಿವಿಧ ಸಮಾಜಗಳ ವತಿಯಿಂದ ಶ್ರೀಗಳಿಗೆ ಪೂರ್ಣಕುಂಭ ಸ್ವಾಗತದೊಂದಿಗೆ ಕಾಕರಮಠದ ವಿಠ್ಠಲಸದಾಶಿವ ದೇವಾಲಯಕ್ಕೆ ಬರ ಮಾಡಿಕೊಳ್ಳಲಾಗುವುದು ಈ ಸಂದರ್ಭದಲ್ಲಿ ದೇವಾಲಯದ ಆಡಳಿತ ಮಂಡಳಿಯ ವತಿಯಿಂದ ಪಾದ ಪೂಜೆ ಶ್ರೀಗಳಿಂದ ಆಶೀರ್ವಚನ, ಚಂದ್ರಮೌಳೇಶ್ವರ ಪೂಜೆ, ಪ್ರಸಾದ ವಿತರಣೆ, ಶಾರದಾಂಬಾ ಮಹಿಳಾ ಮಂಡಲದವರಿಂದ ಭಜನಾ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಮೇ 2 ರಂದು ಬೆಳಿಗ್ಗೆ 8.30 ಕ್ಕೆ ಮಾಧವನಗರದ ಬಿಂದು ಮಾಧವ ದೇವಾಲಯಕ್ಕೆ ಭೇಟಿ ನೀಡಲಿರುವ ಜಗದ್ಗುರುಗಳು ಬೆಳಿಗ್ಗೆ 9.30 ಘಂಟೆಗೆ ಭಾವಿಕೇರಿ ವೈಶ್ಯ ಸಮಾಜದ ಶ್ರೀನಾಗದೇವತಾ ಕಟ್ಟೆಗೆ ಭೇಟಿನೀಡಿ ಭಾವಿಕೇರಿ ವೈಶ್ಯ ಸಮಾಜದವರಿಂದ ಭಿಕ್ಷಾ ವಂದನೆ ಸ್ವೀಕರಿಸಲಿದ್ದಾರೆ.

ಮದ್ಯಾಹ್ನ 11 ಘಂಟೆಗೆ ಕೇಣಿಯ ಮಹಾಸತಿ ದೇವಾಲಯಕ್ಕೆ ಭೇಟಿ ನೀಡಲಿರುವ ಸ್ವಾಮೀಜಿ ಬಂಟ ಸಮಾಜದ ಭಿಕ್ಷಾವಂದನೆ ಸ್ವೀಕರಿಸಿ ಆಶೀರ್ವಚನ ನೀಡಲಿದ್ದು ಮದ್ಯಾಹ್ನ 12 ಘಂಟೆಗೆ ತೆಂಕಣಕೇರಿ ಶಂಕರ ನಾರಾಯಣ ದೇವಾಲಯಕ್ಕೆ ಭೇಟಿ ನೀಡಿ ಉಪನಾಡವ ಸಮಾಜದ ಗೌರವ ಪೂಜೆ ಸ್ವೀಕರಿಸದಿದ್ದಾರೆ.

ಸಂಜೆ 6 ಘಂಟೆಗೆ ವಿಠ್ಠಲ ಸದಾಶಿವ ದೇವಾಲಯದಲ್ಲಿ ಅಂಕೋಲಾದ ಸಮಸ್ತ ಭಕ್ತಾಧಿಗಳಿಂದ ಅಭಿನಂದನಾ ಕಾರ್ಯಕ್ರಮ ಬಿನ್ನವತ್ತಳೆ ಸಮರ್ಪಣೆ ನಡೆಯಲಿದೆ.
ಮೇ 3 ರಂದು ಬೆಳಿಗ್ಗೆ ಜಗದ್ಗುರುಗಳ ದಿವ್ಯ ಉಪಸ್ಥಿತಿಯಲ್ಲಿ ಶ್ರೀವಿಠ್ಠಲ ಸದಾಶಿವ ದೇವರ ಅಷ್ಟಬಂಧ, ಕಲಾಭಿವೃದ್ಧಿ ಮತ್ತು ಕುಂಭಾಭಿಷೇಕ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದ್ದು ನಂತರ ಭಕ್ತರಿಂದ ಪಾದ ಪೂಜೆ, ಭಿಕ್ಷಾವಂದನೆ ಮದ್ಯಾಹ್ನ ದೇವರ ಮಹಾಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಲಿದೆ.

ಜೈ ಶಾರದಾಂಬಾ ಸೌಹಾರ್ದ ಸಹಕಾರಿ ಸಂಘದ ಪ್ರಧಾನ ಕಛೇರಿ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು
ಮದ್ಯಾಹ್ನ ಅವರ್ಸಾದಲ್ಲಿ ಕ್ಷತ್ರಿಯ ಕೋಮಾರಪಂಥ ಸಮಾಜದ ವಿಜಯದುರ್ಗಾ ಸಭಾಭವನಕ್ಕೆ ಭೇಟಿ ನೀಡಲಿದ್ದು ಅಲ್ಲಿ ಸ್ವಾಮಿಗಳ ಪಾದಪೂಜೆ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದರು.
ದೇವಾಲಯದ ಅರ್ಚಕ,ಮಠದ ಮುದ್ರಾಧಿಕಾರಿ ಸುರೇಶ್ಚಂದ್ರ ಭಾಟೆ
ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು.

ಸ್ವಾಗತ ಸಮಿತಿ ಅಧ್ಯಕ್ಷ ಪಾಂಡುರಂಗ ಶೆಟ್ಟಿ, ಉಪಾಧ್ಯಕ್ಷ ನಾಗಾನಂದ ಬಂಟ, ಪ್ರದೀಪ ನಾಯ್ಕ, ಬಂಟ ಸಮಾಜದ ಪ್ರಮುಖ ರವೀಂದ್ರ ಬಂಟ, ಪ್ರಸನ್ನ ಬಂಟ, ಜಯಂತ ನಾಯ್ಕ, ವಿಠ್ಠಲ ಸದಾಶಿವ ದೇವಸ್ಥಾನದ ಅಧ್ಯಕ್ಷ ಗಣಪತಿ ಓನಮ ಶೆಟ್ಟಿ, ವೈವಾಟದಾರ ಕಿರಣ ಶೆಟ್ಟಿ, ಸುಹಾಸ ಶೆಟ್ಟಿ, ಶೇಷಗಿರಿ ಶೆಟ್ಟಿ, ರವೀಂದ್ರ ವೈದ್ಯ, ಸುರೇಶ ಶೆಟ್ಟಿ, ಇತರಿದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button