Important
Trending

ಮುಂಬೈಗೆ ಹೋಗಿ ಬರುವುದಾಗಿ ಹೋದವ ನಾಪತ್ತೆ: ಗುರುತು ಸಿಕ್ಕರೆ ಮಾಹಿತಿ ನೀಡುವಂತೆ ಮನವಿ

ಕುಮಟಾ: ವ್ಯಕ್ತಿಯೋರ್ವರು ಮುಂಬೈಗೆ ಹೋಗಿ ಬರುವುದಾಗಿ ತಿಳಿಸಿ ಮನೆಯಿಂದ ಹೋದವ, ಇದುವರೆಗೆ ಮನೆಗೆ ಬಾರದೇ ಇರುವ ಕಾರಣ, ಕಾಣೆಯಾದ ಇವರನ್ನು ಹುಡುಕಿಕೊಡುವಂತೆ ಕುಟುಂಬಸ್ಥರು ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಕುಮಟಾ ತಾಲೂಕಿನ ಕಾಗಲ್ ಅಂಗಡಿಕೇರಿಯ ಅಬ್ದುಲ್ ಗಪೂರ ಇಸ್ಹಾಖ ಹೋಡೇಕರ ಎನ್ನುವವರೆ ಕಾಣೆಯಾದ ವ್ಯಕ್ತಿ.

ಮುಂಬೈಗೆ ಹೋಗಿ ಬರುವುದಾಗಿ ಮನೆಯಿಂದ ಹೊಗಿದ್ದ ಇವರು ಇದುವರೆಗೆ ಮನೆಗೂ ಬಂದಿಲ್ಲವಾಗಿದ್ದು, ಅದೇ ರೀತಿ ಯಾವುದೇ ರೀತಿಯ ಸಂಪರ್ಕಕ್ಕೂ ಸಿಕ್ಕಿಲ್ಲ ಎನ್ನಲಾಗಿದೆ. ಆದ ಕಾರಣ ಕಾಣೆಯಾದ ತನ್ನ ಪತಿಯನ್ನು ಹುಡುಕಿಕೊಡುವಂತೆ ಪತ್ನಿ ಫಾತಿಮಾ ಅಬ್ದುಲ್ ಗಪೂರ ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಾಣೆಯಾದ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪತ್ತೆ ಕಾರ್ಯ ಕೈಗೊಂಡಿದ್ದಾರೆ.

ವಿಸ್ಮಯ ನ್ಯೂಸ್, ಯೋಗೀಶ್ ಮಡಿವಾಳ, ಕುಮಟಾ

Back to top button