Important
Trending

ಸೋರುತಿಹುದು ಸ್ಮಶಾನದ ಶೆಡ್ಡಿನ ಮಾಳಿಗೆ? ಮಳೆಗಾಲದಲ್ಲಿ ಶವ ಸಂಸ್ಕಾರಕ್ಕೆ ಅತೀವ ತೊಂದರೆ

ವ್ಯವಸ್ಥೆ ಸರಿಪಡಿಸದಿದ್ದರೆ ಸಾರ್ವಜನಿಕರಿಂದ ಪ್ರತಿಭಟನೆ ಎಚ್ಚರಿಕೆ

ಅಂಕೋಲಾ ; ಪುರಸಭೆ ವ್ಯಾಪ್ತಿಯ ಕೋಟೆವಾಡದಲ್ಲಿರುವ ಹಿಂದೂ ಸ್ಮಶಾನ ಭೂಮಿ (ಮುಕ್ತಿಧಾಮ ) ಇಲ್ಲಿನ ಅವ್ಯವಸ್ಥೆಯಿಂದಾಗಿ ಆಗಾಗ ಸುದ್ದಿಯಾಗುತ್ತಲೇ ಇರುವಂತಾಗಿದೆ. ಇಲ್ಲಿನ ಶವಸಂಸ್ಕಾರ ಶೆಡ್ ನ ಮೇಲ್ಚಾವಣಿ ಹೊದಿಕೆ (ಶೀಟುಗಳು) ಹಾರಿ ಹೋಗಿ ತಿಂಗಳುಗಳೇ ಕಳೆದಿದ್ದು, ಮಳೆಗಾಲದ ಈ ದಿನಗಳಲ್ಲಿ ನೀರು ಸೋರುವಿಕೆಯಿಂದ ಶವಸಂಸ್ಕಾರಕ್ಕೆ ಅತೀವ ತೊಂದರೆಯಾಗುತ್ತಿದೆ.   

ಪುರಸಭೆಯವರು ಸ್ಥಳ ಪರಿಶೀಲಿಸಿ ಕೂಡಲೇ ವ್ಯವಸ್ಥೆ ಸರಿಪಡಿಸದಿದ್ದರೆ, ಸ್ವಚ್ಛತೆ ಸೇರಿದಂತೆ ಇಲ್ಲಿನ ಅವ್ಯವಸ್ಥೆ ಕುರಿತು ಪ್ರತಿಭಟಿಸಬೇಕಾದೀತು ಎಂದು ಸಾರ್ವಜನಿಕರ ಪರವಾಗಿ ಸಾಮಾಜಿಕ ಕಾರ್ಯಕರ್ತರಾದ ಕನಸಿಗದ್ದೆಯ ವಿಜಯಕುಮಾರ ನಾಯ್ಕ, ಬೊಮ್ಮಯ್ಯ ನಾಯ್ಕ, ಅನಿಲ ಮಹಾಲೆ ಮತ್ತಿತರರು ಎಚ್ಚರಿಸಿದ್ದಾರೆ ಸಂಬಂಧಿತ ಪುರಸಭೆಯವರು ಈಗಲಾದರೂ ಎಚ್ಚೆತ್ತುಕೊಂಡು ಸಾರ್ವಜನಿಕರ ಪ್ರತಿಭಟನೆಗೂ ಮುನ್ನ ಅವ್ಯವಸ್ಥೆ ಸರಿಪಡಿಸುವರೇ ಕಾದು ನೋಡಬೇಕಿದೆ.                   

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button