ಶ್ರೀಸ್ವರ್ಣ ಮಹಾಸತಿ ಯಕ್ಷಿ ಚೌಡೇಶ್ವರಿ ದೇವಿಯ ವಾರ್ಷಿಕ ಪೂಜೆ ಮತ್ತು ಜಾತ್ರಾ ಮಹೋತ್ಸವ ಸಂಪನ್ನ
ಶ್ರೀ ಸ್ವರ್ಣ ಮಹಾಸತಿ ಯಕ್ಷಿ ಚೌಡೇಶ್ವರಿ ದೇವಸ್ಥಾನ, ತಲಗೋಡು, ಊರಕೇರಿ, ಕುಮಟಾ ಇದರ ವಾರ್ಷಿಕ ಪೂಜೆ ಮತ್ತು ಜಾತ್ರಾ ಮಹೋತ್ಸವ ಧಾರ್ಮಿಕ ವಿಧಿವಿಧಾನದಂತೆ ಸಂಪನ್ನಗೊAಡಿತು. ಏಪ್ರಿಲ್ 26 ರಿಂದ ಧಾರ್ಮಿಕ ಕಾರ್ಯಕ್ರಮ ಆರಂಭವಾಗಿದ್ದು, ಸುದರ್ಶನ ಹೋಮ, ಧ್ವಜಾರೋಹಣ ವಾಸ್ತುಬಲಿ ದಿಕ್ಬಾಲಬಲಿ ನಡೆಯಿತು. ಏಪ್ರಿಲ್ 27 ರಂದು ಕಲಾವೃದ್ಧಿ, ಮಹಾಪೂಜೆ, ಪಲ್ಲಕ್ಕಿ ಉತ್ಸವ, ಅಷ್ಟಾವಧಾನ ಸೇವೆ ನಡೆಯಿತು. ಏಪ್ರಿಲ್ 28 ರಂದು ತೀರ್ಥಸ್ನಾನ, ಮಹಾಪೂರ್ಣಾಹುತಿ, ಪ್ರಸಾದ ವಿತರಣೆ, ಸಂಜೆ ಬಂಡಿಹಬ್ಬ, ಶ್ರೀದೇವರ ಅಪ್ಪಣೆ ಮಹಾಪೂಜೆ, ಮಹಾಪ್ರಸಾದ ವಿತರಣೆ ನಡೆಯಿತು.
ನಂತರ 18 ಟನ್ ಕಟ್ಟಿಗೆಯಿಂದ ಕೆಂಡವನ್ನು ಸಿದ್ದಪಡಿಸಿ ಕೆಂಡವನ್ನು ಪ್ರವೇಶಿಸಿದರು. ಈ ವೇಳೆ ಚಿಕ್ಕ ಮಕ್ಕಳಿಂದಲೂ ಸಹ ಕೆಂಡವನ್ನು ಪ್ರವೇಶಿಸಿದ ದ್ರಶ್ಯ ಎಲ್ಲರ ಗಮನ ಸಳೆಯಿತು. ನಂತರ ಶ್ರೀ ದೇವರ ಕಲಸವು ಭಕ್ತರಿಗೆ ಅಭಯವನ್ನು ನೀಡಿ ಮೂಲ ಸಾನಿದ್ಯಕ್ಕೆ ತೆರಳಿ ಅಲ್ಲಿ ವಿಧಿವಿಧಾನದಂತೆ ಪೂಜಿಸಿ ವಿಸರ್ಜಿಸಲಾಯಿತು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ದೇವರಿಗೆ ವಿವಿದ ಸೇವೆ, ಪೂಜೆ ಸಲ್ಲಿಸಿ ಶ್ರೀ ದೇವರ ಕೃಪೆಗೆ ಪಾತ್ರರಾದರು.
ವಿಸ್ಮಯ ನ್ಯೂಸ್, ಕುಮಟಾ