ಕಾಂಗ್ರೆಸ್ ಪ್ರನಾಳಿಕೆಯಲ್ಲಿದ್ದ ಭಜರಂಗ ದಳ ನಿಷೇಧ ಭರವಸೆಯನ್ನು ಹಿಂಪಡೆಯುವಂತೆ ಭಟ್ಕಳದಲ್ಲಿ ಮನವಿ
ಭಟ್ಕಳ: ಹಿಂದೂಗಳ ಧರ್ಮ ರಕ್ಷಣೆಗಾಗಿ ಹಿಂದೂಗಳ ಮೇಲೆ ಆಗುತ್ತಿರುವ ಅಕ್ರಮಣದ ವಿರುದ್ದ ಹೋರಾಡಲು ಧರ್ಮ ರಕ್ಷಕ, ದೇಶಭಕ್ತ ಸಂಘೆ ಭಜರಂಗ ದಳವನ್ನು ಕಾಂಗ್ರೇಸ್ ಪಕ್ಷ ನಿಷೇಧಿಸುವ ಕುರಿತು ತನ್ನ ಪ್ರನಾಳಿಕೆಯಲ್ಲಿ ಘೋಷನೆ ಮಾಡಿರುವುದನ್ನು ಹಿಂಪಡೆಯಲು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಭಟ್ಕಳ ಶ್ರೀರಾಮ ಸೇನಾ ಸಂಘಟನೆಯ ಪ್ರಮುಖ ನ್ಯಾಯವಾದಿ ಧತ್ತಾತ್ರೆಯ ನಾಯ್ಕ ನೇತ್ರತ್ವದಲ್ಲಿ ಭಟ್ಕಳ ಉಪವಿಭಾಗಾಧಿಕಾರಿಗಳ ಮೂಲಕ ಕೇಂದ್ರ ಚುನಾವಣೆ ಕಮಿಷನ್ ಗೆ ಮನವಿ ನೀಡಲಾಯಿತು.
ಕಾಂಗ್ರೇಸ್ ಪಕ್ಷ ಬಿಡುಗಡೆಗೊಳಿಸಿದ ಪ್ರಣಾಳಿಕೆಯಲ್ಲಿ ಭಜರಂಗ ದಳವನ್ನು ನಿಷೇದಿಸುವ ಭರವಸೆ ನೀಡಿದ್ದಾರೆ. ಕಾನೂನು ಬದ್ಧವಾಗಿ ನೊಂದಾಯಿತವಾದ ಭಜರಂಗ ದಳವನ್ನು ನಿಷೇಧಿಸುವ ಹೇಳಿಕೆ ಕಾನೂನು ಬಾಹೀರವಾಗಿದೆ. ಭಜರಂಗ ದಳ ಹಿಂದೂಗಳು ಮತ್ತು ರಾಷ್ಟç ರಕ್ಷಣೆಗಾಗಿ ರಾಮ ಮಂದಿರ ಆಂದೋಲನ ಸಮಯದಲ್ಲಿ ಹುಟ್ಟಿದ ರ್ಶರೀ ರಾಮನ ಭಕ್ತ ಭಜರಂಗಿ ಸಂಘಟನೆ ದೇಶದಲ್ಲಿ ಪ್ರತಿ ಹಿಂದೂಳಲ್ಲಿ ಮನೆ ಮಾಡಿದೆ.
ಭಜರಂಗ ದಳ ರಾಷ್ಟೀಯ ಸಂಘಟನೆ ರಾಜ್ಯ ಸರಕಾರ ನಿಷೇಧಿಸಲು ಅವಕಾಸ ಇಲ್ಲ. ಕಾಂಗ್ರೇಸ್ ಪಕ್ಷ ಮುಸ್ಲೀಂ ವೋಟ್ ಪಡೆಯಲು ಈ ರೀತಿ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಕಾಂಗ್ರೇಸ್ ಪಕ್ಷ ತಕ್ಷಣ ಈ ವಿಷಯರನ್ನು ಹಿಂಪಡೆಯಲು ಕೇಂದ್ರ ಚುನಾವಣಾ ಆಯೋಗ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಹೇಳಲಾಗಿದೆ. ಈ ಸಂರ್ಭದಲ್ಲಿ ಭಜರಂಗ ದಳದ ಪ್ರಮುಖರಾದ ಸುಬ್ರಾಯ ನಾಯ್ಕ, ಶ್ರೀಧರ ನಾಯ್ಕ, ಪದ್ಮಾವತಿ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು
ವಿಸ್ಮಯ ನ್ಯೂಸ್ ಉದಯ್ ಎಸ್ ನಾಯ್ಕ , ಭಟ್ಕಳ