5)ಯಲ್ಲಾಪುರ ಬಿಜೆಪಿ -73952 ಕಾಂಗ್ರೆಸ್ -70193 ಜೆಡಿಎಸ್- 1630 ಗೆದ್ದ ಪಕ್ಷ -ಬಿಜೆಪಿ ಅಭ್ಯರ್ಥಿ- ಶಿವರಾಮ್ ಹೆಬ್ಬಾರ್ ಗೆಲುವಿನ ಅಂತರ- 3759
6)ಹಳಿಯಾಳ ಬಿಜೆಪಿ -53328 ಕಾಂಗ್ರೆಸ್ -56912 ಜೆಡಿಎಸ್- 28682 ಗೆದ್ದ ಪಕ್ಷ -ಕಾಂಗ್ರೆಸ್ ಅಭ್ಯರ್ಥಿ- ಆರ್.ವಿ ದೇಶಪಾಂಡೆ. ಗೆಲುವಿನ ಅಂತರ- 3584
03:46 PM: ಉತ್ತರಕನ್ನಡ ಜಿಲ್ಲೆಯ ಹೈ ವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾಗಿದ್ದ ಹಾಲಿ ಶಾಸಕಿ ಹಾಗೂ ಮಾಜಿ ಶಾಸಕ ನ ನಡುವಿನ ನೇರ ಹಣಾಹಣಿಗೆ ತೆರೆದುಕೊಂಡಿದ್ದ ಕಾರವಾರ – ಅಂಕೋಲಾ ವಿಧಾನ ಸಭಾ ಕ್ಷೇತ್ರದ 2023 ರ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು , ಕಾಂಗ್ರೆಸ್ ನ ಸತೀಶ್ ಸೈಲ್ ಗೆಲುವು ಸಾಧಿಸಿದ್ದಾರೆ. 76,305 ಮತ ಪಡೆದು ಗೆಲುವು ಸಾಧಿಸುವ ಮೂಲಕ ಸೈಲ್, ಆನಂದದ ನಗೆ ಬೀರಿದ್ದಾರೆ.
03:43 PM: ಕಳೆದ ಆರು ಅವಧಿ ಹಾಗು ಸತತ 30 ವರ್ಷಗಳಿಂದ ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ 9012 ಮತಗಳ ಅಂತರದಿoದ ಗೆಲುವಿನ ನಗೆ ಬೀರಿದ್ದಾರೆ . ಕಾಗೇರಿ 66,639 ಮತಗಳನ್ನು ಪಡೆದರೆ, ಭೀಮಣ್ಣ ನಾಯ್ಕ 75656 ಮತಗಳನ್ನು ಪಡೆದಿದ್ದಾರೆ.
01:56 PM: ಜಿಲ್ಲೆ 6 ಕ್ಷೇತ್ರಗಳಲ್ಲಿ ಕಾಂಗ್ರೆಸ್ 4, ಬಿಜೆಪಿಗೆ 2 ಸ್ಥಾನ. ಚುನಾವಣಾ ಅಧಿಕಾರಿಗಳಿಂದ ಅಧಿಕೃತ ಘೋಷಣೆ ಮಾತ್ರ ಬಾಕಿ. ಭಟ್ಕಳದಲ್ಲಿ ಮಂಕಾಳ್ ವೈದ್ಯ, ಹಳಿಯಾಳದಲ್ಲಿ ದೇಶಪಾಂಡೆ, ಕಾರವಾರದಲ್ಲಿ ಸತೀಶ್ ಸೈಲ್, ಶಿರಸಿಯಲ್ಲಿ ಭೀಮಣ್ಣ ನಾಯ್ಕಗೆ ಗೆಲುವು. ಯಲ್ಲಾಪುರದಲ್ಲಿ ಶಿವರಾಮ್ ಹೆಬ್ಬಾರ್ ವಿಜಯೋತ್ಸವ. ಕುಮಟಾದಲ್ಲಿ ದಿನಕರ ಶೆಟ್ಟಿ ಗೆಲುವು ? ಅಧಿಕೃತ ಘೋಷಣೆಯೊಂದೇ ಬಾಕಿ.
8.39 AM :ಭಟ್ಕಳದಲ್ಲಿ ಮುನ್ನಡೆ ಸಾಧಿಸಿದ ಬಿಜೆಪಿ ಅಭ್ಯರ್ಥಿ ಸುನೀಲ್ ನಾಯ್ಕ ಕುಮಟಾದಲ್ಲಿ ಬಿಜೆಪಿಯ ದಿನಕರ ಶೆಟ್ಟಿ ಮುನ್ನಡೆ
8.28 AM: ಶಿರಸಿ ಸಿದ್ದಾಪುರ ವಿಧಾನಸಭಾ ಕ್ಷೇತ್ರ ಬಿಜೆಪಿಯ ವಿಶ್ವೇಶರ ಹೆಗಡೆ ಕಾಗೇರಿ ಮುನ್ನಡೆ ಹಳಿಯಾಳದಲ್ಲಿ ಕಾಂಗ್ರೆಸ್ ಮುನ್ನಡೆ ಭಟ್ಕಳದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಂಕಾಳ್ ವೈದ್ಯ ಮುನ್ನಡೆ
8.18 AM: ಬಾಳಿಗಾ ಕೇಂದ್ರದಲ್ಲಿ ಮತ ಎಣಿಕೆ ಆರಂಭವಾಗಿದ್ದು, ಬಾಳಿಗಾ ಕಾಲೇಜಿನ ಸುತ್ತ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ. ಬ್ಯಾರಿಕೇಡ್ ಹಾಕಿ ಹೆಗಡೆ ಕ್ರಾಸ್ ಸಮೀಪದ ರಸ್ತೆಯಲ್ಲಿ ನಿಂತಿರುವ ಪೊಲೀಸರು, ಪಾಸ್ ಇದ್ದವರಿಗೆ ಮಾತ್ರ ಒಳಗಡೆ ಪ್ರವೇಶಕ್ಕೆ ಅನುಮತಿ ನೀಡುತ್ತಿದ್ದಾರೆ.
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್
Vishnu HegdeSaturday, May 13, 2023, 7:51 AMLast Updated: Saturday, May 13, 2023, 4:49 PM