Focus NewsImportant
Trending

ನೂತನ ಶಾಸಕ ಭೀಮಣ್ಣ ನಾಯ್ಕಗೆ ಭವ್ಯವಾಗಿ ಸ್ವಾಗತಿಸಿದ ಸಹಸ್ರಾರು ಕಾರ್ಯಕರ್ತರು

ಸಿದ್ದಾಪುರ : ಸಿರ್ಸಿ ಸಿದ್ದಾಪುರ ಕ್ಷೇತ್ರದ ನೂತನ ಶಾಸಕ ಭೀಮಣ್ಣ ನಾಯ್ಕ್ ರವರು ಮೊದಲ ಜಯದ ನಂತರ ಕುಮಟಾದ ಮತ ಎಣಿಕೆ ಕೇಂದ್ರದಿಂದ ನೇರವಾಗಿ ಸಿದ್ಧಾಪುರಕ್ಕೆ ಆಗಮಿಸಿದರು ಈ ಸಂದರ್ಭದಲ್ಲಿ ದೊಡ್ಮನೆ ಗ್ರಾಮ ಪಂಚಾಯತ್ ವ್ಯಾಪ್ತಿಯಿಂದ ಸಿದ್ದಾಪುರ ಕುಮಟ ಮುಖ್ಯ ರಸ್ತೆ ಉದ್ದಕ್ಕೂ ಅಭಿಮಾನಿಗಳು ಹಾರ ಹಾಕಿ ಭವ್ಯವಾಗಿ ಸ್ವಾಗತಿಸಿ ಸಿಹಿ ಹಂಚಿ ಸಂಭ್ರಮಾಚರಿಸಿದರು.

ಪಟ್ಟಣಕ್ಕೆ ಆಗಮಿಸಿದ ವೇಳೆ ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಂಡ ಅಭಿಮಾನಿಗಳು ಕಾರ್ಯಕರ್ತರು ಪಟಾಕಿ ಸಿಡಿಸಿ ಭವ್ಯವಾಗಿ ಸ್ವಾಗತಿಸಿ ವಿಜಯೋತ್ಸವವನ್ನು ಸಂಭ್ರಮ ಹಾಗೂ ಸಡಗರದೊಂದಿಗೆ ಆಚರಿಸಿದರು.
ಪಟ್ಟಣದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಸಾಗಿ ನೂತನ ಶಾಸಕರು ಮತದಾರರಿಗೆ ಅಭಿನಂದನೆಯನ್ನು ಸಲ್ಲಿಸಿದರು ಈ ವೇಳೆಯಲ್ಲಿ ಬ್ಲಾಕ್ ಅಧ್ಯಕ್ಷ ವಸಂತ್ ನಾಯ್ಕ್ ಸೇರಿದಂತೆ ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು

ವಿಸ್ಮಯ ನ್ಯೂಸ್ ಸಿದ್ದಾಪುರ

Related Articles

Back to top button