Focus NewsImportant
Trending

ಬ್ರಿಜ್ ಪಕ್ಕ ನದಿತೀರದಲ್ಲಿ ತೇಲುತ್ತಿರುವ ಶವ ಪತ್ತೆ: ಜಿನ್ ಪ್ಯಾಂಟ್ ಮತ್ತು ಟೀ ಶರ್ಟ್ ಧರಿಸಿ ಮೃತ ಪಟ್ಟ ವ್ಯಕ್ತಿ ಯಾರು ?

ಅಂಕೋಲಾ: ಅಂಕೋಲಾ ಕುಮಟಾ ಮಾರ್ಗಮಧ್ಯೆ ಕೊಡಸಣಿ ಬ್ರಿಜ್ ಹತ್ತಿರ ಗಂಗಾವಳಿ ನದಿತೀರದ ಪ್ರದೇಶದಲ್ಲಿ ಅಪರಿಚಿತ ಶವವೊಂದು ಪತ್ತೆಯಾಗಿದೆ. ನದಿಯಲ್ಲಿ ಶವವೊಂದು ತೇಲುತ್ತಿರುವ ಕುರಿತು ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ, ಪಿ ಎ ಸೈ ಕುಮಾರ ಕಾಂಬಳೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಶವವನ್ನು ನೀರಿನಿಂದ ಮೇಲೆತ್ತಿ, ಕಾರವಾರ ಜಿಲ್ಲಾ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲು ಸಾಮಾಜಿಕ ಕಾರ್ಯಕರ್ತರಾದ ಕನಸಿಗದ್ದೆಯ ವಿಜಯಕುಮಾರ ವಾಯ್ ನಾಯ್ಕ, ಬೊಮ್ಮಯ್ಯ ನಾಯ್ಕ, ಪೋಲೀಸ್ ಸಿಬ್ಬಂದಿಗಳಾದ ವಿಜಯ , ಅರುಣ, ಜಗದೀಶ, ಸ್ಥಳೀಯ ಗ್ರಾಮಸ್ಥರು ಸಹಕರಿಸಿದರು. ಮೃತ ದೇಹ ಕೊಳೆಯಲಾರ0ಭಿಸಿದ್ದು, ಜಿನ್ ಪ್ಯಾಂಟ್ ಮತ್ತು ಶರ್ಟ್ ಧರಿಸಿರುವ ಮೃತ  ವ್ಯಕ್ತಿ ಹಾಗೂ ಘಟನೆ ಕುರಿತಂತೆ ಪೋಲೀಸ್ ತನಿಖೆಯಿಂದ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button