ಶುಭ ಕಾರ್ಯಕ್ಕೆ ಹೊರಟ್ಟಿದ್ದ ವೇಳೆ ಭೀಕರ ಅಪಘಾತ: ಓರ್ವ ಸಾವು: ಇಬ್ಬರಿಗೆ ಗಂಭೀರ ಗಾಯ

ಶಿರಸಿ: ಶುಭ ಕಾರ್ಯಕ್ಕೆ ಸಾಗರದಿಂದ ಶಿರಸಿಗೆ ಹೊರಟಿದ್ದ ಟೆಂಪೋ ಮತ್ತು ಸಿದ್ದಾಪುರಕ್ಕೆ ಸಾಗುತ್ತಿದ್ದ ಗ್ರಾನೈಟ್ ತುಂಬಿದ ಟಾಟಾ ಏಸ್ ಗಾಡಿ ನಡುವೆ ಡಿಕ್ಕಿಯಾಗಿದ್ದು, ಲೈಲ್ಯಾಂಡ್ ಗಾಡಿಯಲ್ಲಿದ್ದ ಓರ್ವ ಮೃತಪಟ್ಟ ಘನೆ ಅಜ್ಜೀಬಳ ಸಮೀಪ ನಡೆದಿದೆ. ಮದುವೆ ಟೆಂಪೋದಲ್ಲಿದ್ದ ಈರ್ವರಿಗೆ ಗಂಭೀರ ಗಾಯಗಳಾಗಿದ್ದು, ಹುಬ್ಬಳ್ಳಿಯ ಆಸ್ಪತ್ರೆಗೆ ಸೇರಿಲಾಗಿದೆ. ಟೆಂಪೊದಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ.

ಹೌದು, ಟೆಂಪೋ ಹಾಗೂ ಟಾಟಾ ಎಸ್ ಗಾಡಿಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದ್ದು, ಟಾಟಾಎಸ್ ವಾಹನ ಚಾಲಕ ಇಸ್ಮಾಯಿಲ್ ಸ್ಥಳದಲ್ಲೇ ಮೃತಪಟ್ಟ ದುರ್ದೈವಿ ಯಾಗಿದ್ದಾನೆ. ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಗೆ ಕರೆದೊಯ್ಯಲಾಗಿದೆ.

ವಿಸ್ಮಯ ನ್ಯೂಸ್, ಶಿರಸಿ

Exit mobile version