Focus News
Trending

ಕರೊನಾ ಸೋಂಕಿನಿoದ ಶಾಸಕ ಸುನೀಲ್ ನಾಯ್ಕ ಗುಣಮುಖ

ಆಸ್ಪತ್ರೆಯಿಂದ ಡಿಸ್ಚಾರ್ಜ್
ಮನೆಯಲ್ಲೇ ಒಂದು ವಾರ ಕ್ವಾರಂಟೈನ್

[sliders_pack id=”1487″]

ಭಟ್ಕಳ: ಭಟ್ಕಳ ಹೊನ್ನಾವರ ಶಾಸಕ ಸುನೀಲ್ ನಾಯ್ಕ ಕೊರೊನಾ ಸೋಂಕಿನಿoದ ಗುಣಮುಖರಾಗಿ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕಳೆದ ಆಗಸ್ಟ್ 20 ರಂದು ಜ್ವರದಿಂದ ಬಳಲುತ್ತಿದ್ದ ಶಾಸಕ ಸುನೀಲ ನಾಯ್ಕ ಮುರುಡೇಶ್ವರ ಆರ್.ಎನ್.ಶೆಟ್ಟಿ ಆಸ್ಪತ್ರೆಯಲ್ಲಿ ರ್ಯಾಪಿಡ್ ಪರೀಕ್ಷೆಗೆ ಮಾಡಿಕೊಂಡಾಗ ಕೊರೊನಾ ಸೋಂಕು ಇರುವುದು ಪತ್ತೆಯಾಗಿತ್ತು. ನಂತರ ತಾಲೂಕಾಸ್ಪತ್ರೆಯ ದಾಖಲಾಗಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆ.ಎಂ.ಸಿ ದಾಖಲಾಗಿದ್ದರು. ಸದ್ಯ ಕೊರೊನಾ ಸೋಂಕಿನಿoದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.


ಈ ಸಂದರ್ಭದಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಶಾಸಕರಿಗೆ ಉಡುಪಿ ಬಿಜೆಪಿವತಿಯಿಂದ ಸ್ವಾಗತಿಸಲಾಯಿತು. ನಂತರ ನೇರವಾಗಿ ಉಡುಪಿಯಿಂದ ಶಿರಾಲಿಯಲ್ಲಿರುವ ತಮ್ಮ ಮನೆಗೆ ಬಂದು ಸರ್ಕಾರದ ನಿಯಮದಂತೆ ಒಂದು ವಾರ ಹೋಮ್ ಕ್ವಾರಂಟೈನಗೆ ಒಳಪಟ್ಟಿದ್ದಾರೆ.


ವಿಸ್ಮಯ ನ್ಯೂಸ್, ಉದಯ ಎಸ್ ನಾಯ್ಕ, ಭಟ್ಕಳ

ಬೇಕಾಗಿದ್ದಾರೆ

ಪ್ರತಿಷ್ಠಿತ ಕಂಪನಿಗೆ ರಾಜ್ಯಾದ್ಯಂತ ವಿತರಕರು ಬೇಕಾಗಿದ್ದಾರೆ
ಆಸಕ್ತಿ ಇದ್ದಲ್ಲಿ ಕೂಡಲೇ ಸಂಪರ್ಕಿಸಿ
ಸಂಪರ್ಕಿಸಿ: 7848833568

Back to top button