ನನ್ನನ್ನೇ ಮದುವೆಯಾಗು: ಯುವಕ ಬ್ಲಾಕ್ ಮೇಲ್? ಯುವತಿ ನೇಣಿಗೆ ಶರಣು

ಹೊನ್ನಾವರ: ಯುವಕ ಕರೆ ಮಾಡಿ ನೀನು ನನ್ನನ್ನು ಮದುವೆಯಾಗು. ನನ್ನ ಹೊರತಾಗಿ ಬೇರೆಯವರನ್ನು ಮದುವೆಯಾಗಲು ಬಿಡುವುದಿಲ್ಲ. ನಿಮ್ಮ ಊರಿನವರಿಗೆ ಹಾಗೂ ಮದುವೆಯಾಗಲೂ ಬರುವ ಹುಡುಗನ ಕಡೆಯವರಿಗೆ ನನ್ನ ಪ್ರೀತಿಸಿದ ವಿಷಯ ಹೇಳಿ ಮಾನ ಹರಾಜು ಮಾಡುತ್ತೇನೆ ಎಂದು ಮಾನಸಿಕವಾಗಿ ಹಿಂಸಿಸುತ್ತಿದ್ದ ಎನ್ನುವ ಆರೋಪ ಕೇಳಿಬಂದಿದ್ದು, ಇದರಿಂದ ಮನನೊಂದ ಯುವತಿ ಸಾವಿಗೆ ಶರಣಾಗಿದ್ದಾಳೆ.

ಹೌದು, ತಾಲೂಕಿನ ಅನಿಲಗೋಡ ಮೂಲದ ಯುವತಿಯಾದ ಅಕ್ಷತಾ ನಾಗೇಂದ್ರ ನಾಯ್ಕ ಅವರಿಗೆ ಮಂಕಿ ಮೂಲದ ಯೋಗೀಶ ಎನ್ನುವ ಯುವಕ ಕರೆ ಮಾಡಿ, ನೀನು ನನ್ನನ್ನೇ ಮದುವೆಯಾಗು ಎಂದು ಪೀಡಸುತ್ತಿದ್ದ ಎನ್ನಲಾಗಿದೆ. ಇದೇ ವಿಷಯ ಮನಸ್ಸಿಗೆ ಹಚ್ಚಿಕೊಂಡು ಅಕ್ಷತಾ ನಾಯ್ಕ ಇಡಗುಂಜಿ ಕುಳಿಮನೆಯ ಸಂಭದಿಕರ ಮನೆಯ ಸಮೀಪದ ಗೇರು ಮರಕ್ಕೆ ಸೀರೆ ಕುತ್ತಿಗೆಗೆ ಸುತ್ತಿಕೊಂಡು ಸಾವಿಗೆ ಶರಣಾಗಿದ್ದಾಳೆ. ಈಖೆಯ ಆತ್ಮಹತ್ಯೆಗೆ ಯೋಗಿಶ ಕಾರಣ ಎಂದು ಮೃತಳ ತಂದೆ ಮಂಕಿ ಪೊಲೀಸ್ ಠಾಣಿಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಈಕೆಯ ಮದುವೆ ನಿಶ್ಚಯವಾಗಿತ್ತು ಎನ್ನಲಾಗಿದ್ದು, ಹೆಣ್ಣು ನೋಡಲು ಬಂದಿದ್ದ ವೇಳೆ, ಪ್ರೀತಿಸುತ್ತಿದ್ದ ಎನ್ನಲಾದ ಯುವಕ ಅವರಿಗೆ ತಮ್ಮ ಪ್ರೀತಿಯ ಕುರಿತು ಹೇಳಿದ್ದ ಎನ್ನಲಾಗಿದೆ. ಈ ಸಂಬoಧ ಯುವತಿ ಪೊಲೀಸರಿಗೆ ದೂರು ನೀಡಿದ್ದು, ಆತನನನ್ನು ಠಾಣೆಗೆ ಕರೆಯಿಸಿ, ವಿಚಾರಿಸುವಂತೆ ಮನವಿಯನ್ನೂ ಮಾಡಿದ್ದಳು. ಪೊಲೀಸರು ನಿರ್ಲಕ್ಷ್ಯ ವಹಿಸಿದ್ದರಿಂದಲೇ ಇಂದು ದುರಂತ ಸಂಭವಿಸಿದೆ ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Exit mobile version