ಸಮುದ್ರದ ಅಲೆಗೆ ಸಿಲುಕಿ ಯುವಕ ಸಾವು: ಇಕೋ ಬೀಚ್ ನಲ್ಲಿ ದುರ್ಘಟನೆ

ಹೊನ್ನಾವರ :ತಾಲೂಕಿನ ಕಾಸರಕೋಡ ಸಮೀಪದ ಬ್ಲೂಪ್ಲ್ಯಾಗ್ ಮಾನ್ಯತೆ ಪಡೆದಿರುವ ಇಕೋ ಬೀಚ್ ಸಮೀಪ ಕಡಲತೀರಕ್ಕೆ ಮೈಸೂರು ಮಹಾಜನ್ ಕಾಲೇಜಿನಲ್ಲಿ ಎಂ.ಬಿ.ಎ ವ್ಯಾಸಂಗ ಮಾಡುತ್ತಿದ್ದ ಚಿಕ್ಕಮಂಗಳೂರು ಮೂಡಗೇರಿಯ ಮಧ್ವರಾಜ ಟಿ.ಸಿ ಇವರು ಸಮುದ್ರದಲ್ಲಿ ಈಜಲು ತೆರಳಿ ನಾಪತ್ತೆಯಾಗಿ, ಶವವಾಗಿ ಪತ್ತೆಯಾಗಿದ್ದಾನೆ. ಮೂವರು ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದು ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನ ಪಡೆದು ರೈಲ್ವೆಯಲ್ಲಿ ಹೊನ್ನಾವರ ಆಗಮಿಸಿ ಇಕೋ ಬೀಚ್ ವಿಕ್ಷಿಸಲು ಆಗಮಿಸಿದಾಗ ಈ ಘಟನೆ ನಡೆದಿದೆ.

ಸಮುದ್ರದಲ್ಲಿ ಮುಳುಗುತ್ತಿದ್ದಾಗ ಸ್ನೇಹಿತರು ಸಹಾಯಯಾಚಿಸುವಾಗ ಸ್ಥಳಕ್ಕೆ ಲೈಪಗಾರ್ಡ ಸಿಬ್ಬಂದಿಗಳು ಹೋಗುವ ಪೂರ್ವದಲ್ಲಿ ಈ ಘಟನೆ ಸಂಭವಿಸಿದೆ. ಸ್ಥಳಕ್ಕೆ ಅರಣ್ಯ ಇಲಾಖೆ, ಪೋಲಿಸ್ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಹೊನ್ನಾವರ ಪೊಲೀಸ್ ಠಾಣಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಸ್ಮಯ ನ್ಯೂಸ್, ಹೊನ್ನಾವರ

Exit mobile version