ಟೈಯರ್ ಬ್ಲಾಸ್ಟ್: ಟೆಂಪೋ ಪಲ್ಟಿಯಾಗಿ ಹಲವರಿಗೆ ಗಾಯ

ಹೊನ್ನಾವರ : ಹೊನ್ನಾವರ ಗೇರುಸೊಪ್ಪ ಮಾರ್ಗದ  ಸುಳಗೋಡ ಹತ್ತಿರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಪ್ಯಾಸೆಂಜರ್ ಟೆಂಪೋ ಟೈಯರ್ ಬ್ಲಾಸ್ಟ್ ಆಗಿ ಟೆಂಪೋ ಪಲ್ಟಿಯಾಗಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ನಡೆದಿದೆ. ಗೇರುಸೊಪ್ಪ ಕಡೆಯಿಂದ ಹೊನ್ನಾವರ ಕಡೆ ಬರುತ್ತಿದ್ದ ಟೆಂಪೋ ಟೈಯರ್ ಬ್ಲಾಸ್ಟ್ ಆಗಿದಿದ್ದು, ಇದರಿಂದ ಚಾಲಕನ ನಿಯಂತ್ರಣ ತಪ್ಪಿದ ಟೆಂಪೋ ಪಲ್ಟಿಯಾಗಿದೆ. ಟೆಂಪೋದಲ್ಲಿದ್ದ ಪ್ರಯಾಣಿಕರಿಗೆ ಹೆಚ್ಚು ಮಂದಿ ಗಾಯಗೊಂಡಿದ್ದು 4 ರಿಂದ 5 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡ ಎಲ್ಲರನ್ನು ಹೊನ್ನಾವರ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರತಿನಿತ್ಯದಂತೆ ತಮ್ಮ ನಿತ್ಯದ ಕೆಲಸಕ್ಕೆ ಹೊರಟ ಪ್ರಯಾಣಿಕರು ಅಪಘಾತದಿಂದ ವಿಚಲಿತರಾದರು. ಅಪಘಾತದ ಸುದ್ದಿ ತಿಳಿದು ಅವರ ಕುಟುಂಬದವರು ಬಂದುಗಳು ಆಸ್ಪತ್ರೆಗೆ ಓಡೋಡಿ ಬಂದರು. ಘಟನಾ ಸ್ಥಳಕ್ಕೆ ಹೊನ್ನಾವರ ಠಾಣಾ ಪಿಎಸ್‌ಐ ಪ್ರವೀಣಕುಮಾರ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಈ ಬಗ್ಗೆ ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Exit mobile version