Focus NewsImportant
Trending

ರೈಲ್ವೆ ಟ್ರ್ಯಾಕ್ ಬಳಿ ಛಿ-ದ್ರ ಛಿ-ದ್ರಗೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆ|ತೊಟ್ಟಬಟ್ಟೆ ಹಾಗೂ ಧರಿಸಿದ ಪಾದರಕ್ಷೆಯ ಮೇಲೆ ಮೃತನನ್ನು ಗುರುತಿಸಿದ ಕುಟುಂಬಸ್ಥರು

ಅಂಕೋಲಾ: ತಾಲೂಕಿನ ಪುರಲಕ್ಕಿ ಬೇಣದ ಬಳಿ ರೈಲ್ವೆ ಹಳಿ ಮೇಲೆ ಛಿ-ದ್ರ ಛಿ-ದ್ರವಾದ ಸ್ಥಿತಿಯಲ್ಲಿ ವ್ಯಕ್ತಿಯೋರ್ವರ ಮೃತ ದೇಹ ಪತ್ತೆಯಾಗಿದ್ದು, ಮೃತ ವ್ಯಕ್ತಿಯನ್ನು ಉದಯ ಬುದ್ದು ಲಕ್ಷೇಶ್ವರ (58) ಹಾಲಿ ವಸತಿ ಕರಿಕಲ್ ಬೋಳೆ – ಪೂರಲಕ್ಕಿಬೇಣ ಎಂದು ಗುರುತಿಸಲಾಗಿದೆ. ಸಾಯಂಕಾಲ 4.30 ರಿಂದ 6-00 ಘಂಟೆ ಅವಧಿಯೊಳಗೆ ಪುರಲಕ್ಕಿ ಬೇಣದ ಬಳಿ ಹಾಯ್ದಿರುವ ರೈಲ್ವೆ ಟ್ರ್ಯಾಕ್ ಬಳಿ ಯಾವುದೋ ವಿಷಯಕ್ಕೆ ಹೋದವರು, ಅದೇ ಸಮಯಕ್ಕೆ ಯಾವುದೋ ರೈಲು ಹರಿದು ಪರಿಣಾಮ ತನ್ನ ತಂದೆ ಮೃತಪಟ್ಟಿರುವುದಾಗಿ ,ಮಗ ಪೊಲೀಸ್ ದೂರು ನೀಡಿದ್ದಾರೆ.ರೈಲು ಹಾಯ್ದ ಪರಿಣಾಮ ವ್ಯಕ್ತಿಯ ಅಂಗಾಂಗಗಳು ಛಿದ್ರ ಛಿದ್ರಗೊಂಡ ಸ್ಥಿತಿಯಲ್ಲಿ ಕಂಡು ಬಂದಿದ್ದು , ನೋಡುಗರು ಭಯಗೊಳ್ಳುವಂತಿತ್ತು.

ಮೃತ ದೇಹ ಪತ್ತೆಯಾದ ದಿನ ವ್ಯಕ್ತಿಯ ಗುರುತು ದೊರಕಿರಲಿಲ್ಲ. ಪಿ.ಎಸ್.ಐ ಕುಮಾರ್ ಕಾಂಬಳೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ್ ಅವರು ರೈಲ್ವೆ ಟ್ರಾಕ್ ನಲ್ಲಿ ಬಹುದೂರ ಸಾಗಿ ಚದುರಿ ಬಿದ್ದ ಮೃತ ದೇಹದ ಅಂಗಾಗಗಳನ್ನು ಒಟ್ಟುಗೂಡಿಸಿದ್ದರು. ನಂತರ ಮೃತದೇಹದ ಅಂಗಾಂಗಗಳನ್ನು ಜಿಲ್ಲಾಸ್ಪತ್ರೆ ಶವಾಗಾರಕ್ಕೆ ಸಾಗಿಸಲಾಗಿತ್ತು .

ರೈಲ್ವೆ ಪೋಲೀಸರು ಹಾಜರಿದ್ದರು. ಸ್ಥಳೀಯ ಪೊಲೀಸ್ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಿದರು. ತಡರಾತ್ರಿ ಆದರೂ ಮನೆಗೆ ಬಾರದ ಯಜಮಾನನ ಹುಡುಕಾಟದಲ್ಲಿದ್ದ ಕುಟುಂಬಸ್ಥರು, ಯಾರದೋ ಮೃತದೇಹ ಪತ್ತೆಯಾಗಿದೆ ಎಂಬ ಸುದ್ದಿ ಕೇಳಿ ಗಾಬರಿಗೊಂಡಿದ್ದರು.ನಂತರ ಆತ ತೊಟ್ಟಿದ್ದ
ಬಟ್ಟೆ, ಪಾದರಕ್ಷೆ ಮತ್ತಿತರ ಆಧಾರದಲ್ಲಿ ಮೃತ ವ್ಯಕ್ತಿಯನ್ನು ಗುರುತಿಸಿದರು ಎನ್ನಲಾಗಿದೆ. ಕಷ್ಟ ಪಟ್ಟು ಕೂಲಿ ಕೆಲಸ ಮಾಡಿ ಸಂಸಾರ ನಿರ್ವಹಣೆ ಮಾಡುತ್ತಿದ್ದ ಉದಯ ಲಕ್ಷ್ಮೇಶ್ವರ ಅಕಾಲಿಕ ನಿಧನಕ್ಕೆ ಲಕ್ಷ್ಮೇಶ್ವರ ಹಾಗೂ ಪುರಲಕ್ಕಿ ಬೇಣ ಸೇರಿದಂತೆ ತಾಲೂಕಿನ ಹಲವು, ನಾಗರಿಕರು ಸಂತಾಪ ಸೂಚಿಸಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button