ವಿಷ ಸೇವಿಸಿ ಅಪ್ಪ-ಮಗ ಸಾವಿಗೆ ಶರಣು

ಶಿರಸಿ: ವಿಪರೀತ ಸಾರಾಯಿ ಚಟಕ್ಕೆ ಒಳಗಾಗಿ ಮಗ, ಕುಡಿಯಲು ಕಳ್ಳತನ ಮಾಡುತ್ತಿದ್ದ ಎನ್ನಲಾಗಿದ್ದು, ಕಳ್ಳತನದ ಕೆಲಸ ಬಹಿರಂಗವಾದ ಬಳಿಕ ಮರ್ಯಾದೆಗೆ ಅಂಜಿ ಅಪ್ಪ, ಮಗ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿರಸಿಯಲ್ಲಿ ನಡೆದಿದೆ. ವಿಪರೀತ ಕುಡಿತದ ದಾಸನಾಗಿದ್ದ ಮಗ ಅಲ್ಲಲ್ಲಿ ಕಳ್ಳತನ ಮಾಡುತ್ತಿದ್ದ. ಇದರಿಂದ ತಂದೆ ಊರಿನಲ್ಲಿ ತಲೆತಗ್ಗಿಸುವಂತಾಗಿತ್ತು.ಅಕ್ಬರಸಾಬ್ ಹಯಾತ್ ಸಾಬ್ ಹಿತ್ತಲಮನಿ ಮತ್ತು ಮುಜಿಬುಲ್ಲಾ ಕ್ಬರ್ ಸಾಬ್ ಹಿತ್ತಲಮನಿ ವಿಷಯ ಸೇವಿಸಿ ಸಾವಿಗೆ ಶರಣಾದವರು ಎಂದು ತಿಳಿದುಬಂದಿದೆ.

ಉದ್ಯೋಗಾವಕಾಶ: 81 ಸಾವಿರದ ವರೆಗೆ ಸಂಬಳ: 1,600 ಹುದ್ದೆಗಳಿಗೆ ನೇಮಕಾತಿ

ಕೆಲದಿನಗಳ ಹಿಂದೆ ಸಂಬoಧಿಕರ ಮನೆಗೆ ತೆರಳಿದ್ದ ತಂದೆ ತನ್ನ ಮಗನಿಂದ ಮಾನ ಮರ್ಯಾದೆ ಹೋಗಿದೆ. ಆತನನ್ನು ಕೇಳಿದರೆ ವಿಷ ಕುಡಿದು ಸಾಯುತ್ತೇನೆ ಎನ್ನುತ್ತಾನೆ. ನನ್ನ ಮಗ ಇಲ್ಲದಿದ್ದರೆ ನಾನು ಬುದುಕುವುದಿಲ್ಲ ಎಂದು ತಂದೆ ಹೇಳಿದ್ದ ಎನ್ನಲಾಗಿದೆ. ಇದಾದ ಕೆಲ ದಿನಗಳ ಬೆನ್ನಲ್ಲೆ ಸಾವಿನ ಸುದ್ದಿ ಸಂಬoಧಿಕರಿಗೆ ಮುಟ್ಟಿದೆ.

ವಿಸ್ಮಯ ನ್ಯೂಸ್, ಶಿರಸಿ

Exit mobile version