ನೇಣು ಹಾಕಿಕೊಂಡು ಸಾವಿಗೆ ಶರಣಾದ ಯುವತಿ

ಸಿದ್ದಾಪುರ: ಯಾವುದೋ ವಿಷಯವನ್ನು ಮನಸ್ಸಿಗೆ ಹಾಕಿಕೊಂಡು ಮನನೊಂದ ಯುವತಿಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ವಂದಾನೆ ಸಮೀಪದ  ಗುಬ್ಬಗೋಡನಲ್ಲಿ ನಡೆದಿದೆ. ರೋಹಿಣಿ ನಾರಾಯಣ ಹಸ್ಲರ್ (24) ಮೃತ ಪಟ್ಟ  ಯುವತಿ.

ದುಡುಕಿನ ಹಾಗೂ ಸಿಟ್ಟಿನ ಸ್ವಭಾವದವಳಾದ ಈಕೆಯು ಆಗಾಗ ಪೋನಿನಲ್ಲಿ ಮಾತನಾಡುತ್ತ ಇರುತ್ತಿದ್ದಳು . ಕುಟುಂಬದವರೊಂದಿಗೆ ಹೆಚ್ಚಿಗೆ ಬೇರೆಯದ ಇವಳು ತನ್ನಷ್ಟಕ್ಕೆ ತಾನೇ ಇರುತ್ತಿದ್ದಳು ಎನ್ನಲಾಗಿದ್ದು, ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯ ಮಾಡಿಗೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಸಿದ್ದಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ವಿಸ್ಮಯ ನ್ಯೂಸ್, ದಿವಾಕರ ಸಂಪಖoಡ, ಸಿದ್ದಾಪುರ

Exit mobile version