ಯಲ್ಲಾಪುರ, ಅಂಕೋಲಾ ರಾಷ್ಟ್ರೀಯ ಹೆದ್ದಾರಿ ಸಂಚಾರ ಸ್ಥಗಿತ

ಕಳೆದ ವರ್ಷವೂ ಆಗಸ್ಟ್ 5 ರಂದೇ ಪ್ರವಾಹ
ತಾತ್ಕಾಲಿಕವಾಗಿ ರಸ್ತೆ ಸಂಪರ್ಕ ಕಡಿತ
ಬದಲಿ ಮಾರ್ಗವಾಗಿ ಸಂಚರಿಸಲು ಸೂಚನೆ

[sliders_pack id=”3491″]

ಯಲ್ಲಾಪುರ: ಭಾರೀ ಮಳೆಯಿಂದಾಗಿ ಯಲ್ಲಾಪುರ, ಅಂಕೋಲಾ ರಾಷ್ಟ್ರೀಯ ಹೆದ್ದಾರಿಯ ಸುಂಕಸಾಳ ಬಳಿ ನೀರು ನಿಂತಿದ್ದು, ಇದರಿಂದಾಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಕಳೆದ ಎರಡು ಮೂರುದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಸುಂಕಸಾಳ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ನೀರು ನಿಂತಿದ್ದು, ವಾಹನಗಳು ಸಂಚರಿಸುವುದು ಅಸಾಧ್ಯವಾಗಿದೆ. ಕಳೆದೆರಡು ದಿನಗಳಿಂದ ಮಳೆಯ ಅಬ್ಬರ ಜೋರಾಗಿದ್ದು ಸುಂಕಸಾಳ (ಹೈಲ್ಯಾಂಡ್)ಬಳಿ ರಾಷ್ಟ್ರೀಯ ಹೆದ್ದಾರಿಗೆ ಗಂಗಾವಳಿ ನದಿ ನೀರು ನುಗ್ಗಿದ ಪರಿಣಾಮವಾಗಿ ಅಂಕೋಲಾ ಯಲ್ಲಾಪುರ ಮುಖ್ಯ ರಸ್ತೆಯನ್ನು ತುರ್ತು ಮಟ್ಟಿಗೆ ಸ್ಥಗಿತಗೊಳಿಸುವಂತಾಗಿದೆ.

ಘಟ್ಟದ ಮೇಲಿನ ತಾಲೂಕುಗಳಲ್ಲಿಯೂ ಮಳೆಯ ಪ್ರಮಾಣ ಹೆಚ್ಚುತ್ತಿದ್ದು ಗಂಗಾವಳಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಕಳೆದ ವರ್ಷ ಅಗಸ್ಟ 5ರಂದೇ ಗಂಗಾವಳಿ ನದಿ ಉಕ್ಕಿ ಹರಿದಿದ್ದು, ಪ್ರವಾಹದ ರಭಸಕ್ಕೆ ನದಿ ತೀರದ ಜನರ ಬದುಕು ಕೊಚ್ಚಿ ಹೋಗಿದ್ದು, ಹವಮಾನ ಇಲಾಖೆ ವರದಿ ಪ್ರಕಾರ ಮತ್ತೆ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಪ್ರವಾಹದ ಭೀತಿ ಪುನಃ ಕಾಡಲಾರಂಭಿಸಿದೆ.

ಹಳವಳ್ಳಿ ಗುಳ್ಳಾಪುರ ರಸ್ತೆಯ ವೆಂಕಣ್ಣ ಕ್ರಾಸ್ ಬಳಿಯು ನೀರು ನುಗ್ಗಿದ್ದು ರಸ್ತೆ ಸಂಚಾರಕ್ಕೆ ತೊಡಕಾಗಿದೆ. ಉಳುವರೆಯ ಅಂಬಿಗರ ಕೊಪ್ಪಕ್ಕೂ ನೀರು ನುಗ್ಗಿದ್ದು ಕಂದಾಯ ಇಲಾಖೆ ಸಿಬ್ಬಂದಿಗಳು ಸ್ಥಳ ಪರಿಶೀಲನೆ ಮಾಡಿದ್ದಾರೆ. ಆಂದ್ಲೆ ರಸ್ತೆಯಲ್ಲಿಯೂ ನೀರಿನ ರಭಸ ಹೆಚ್ಚಿದೆ ಎನ್ನಲಾಗಿದೆ. ಪಟ್ಟಣ ವ್ಯಾಪ್ತಿಯ ಕೇಣಿ ಹಳ್ಳವೂ ತುಂಬಿ ಹರಿಯುತ್ತಿದ್ದು ಕಂತ್ರಿ ಮತ್ತಿತರ ಭಾಗಗಳಿಗೆ ನೀರು ನುಗ್ಗುತ್ತಿದೆ.

ತಹಶೀಲ್ದಾರ ಉದಯ ಕುಂಬಾರ, ತಾಲೂಕ ಪಂಚಾಯತ ಕಾರ್ಯನಿರ್ವಹಕ ಅಧಿಕಾರಿ ಪಿ.ವೈ ಸಾವಂತ, ಕಂದಾಯ ನಿರೀಕ್ಷಕ ರಾಘವೇಂದ್ರ ಜನ್ನು, ಗ್ರಾಮಪಂಚಾಯತ ಲೆಕ್ಕಿಗರಾದ ಭಾರ್ಗವ, ಪ್ರಸಾದ, ಸರೋಜಿನಿ ಗೌಡ, ಡೊಂಗ್ರಿ ಗ್ರಾ.ಪಂ.ಪಿ.ಡಿ.ಓ ಗಿರೀಶ ನಾಯಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ,ತಾಲೂಕಾಡಳಿತದ ವತಿಯಿಂದ ಹಲವು ಮುನ್ನೆಚ್ಚರಿಕೆ ಕೈಗೊಳ್ಳಲಾಗುತ್ತಿದೆ. ಪಿ.ಎಸ್.ಆಯ್ ಇ.ಸಿ ಸಂಪತ್ ಮತ್ತು ಸಿಬ್ಬಂದಿಗಳು ತಾತ್ಕಾಲಿಕವಾಗಿ ರಸ್ತೆ ಸಂಚಾರ ಸ್ಥಗಿತಗೊಳಿಸಿ ರಸ್ತೆ ಸಂಚಾರಿಗಳ ಸುರಕ್ಷತೆಗೆ ಒತ್ತು ನೀಡಿದ್ದಾರೆ.

ಹೀಗಾಗಿ ಈ ಮಾರ್ಗದಲ್ಲಿ ಸಂಚರಿಸುವವರು ಬದಲಿ ಮಾರ್ಗವಾಗಿ ಸಂಚರಿಸಬೇಕೆಂದು ಮಾಹಿತಿ ನೀಡಲಾಗಿದೆ. ಪ್ರತಿವರ್ಷ ಮಳೆಗಾಲದಲ್ಲಿ ಇದೇ ಸಮಸ್ಯೆಯಾಗುತ್ತಿದ್ದು, ವಾಹನಸವಾರರು ಪರದಾಡುವಂತಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Exit mobile version