Follow Us On

WhatsApp Group
Focus News
Trending

ನಿವೃತ್ತ ಕೆಇಬಿ ನೌಕರನ ಎಟಿಎಂ ಕಾರ್ಡ್ ಬದಲಿಸಿ ಹಣ ವಂಚನೆ: ಪ್ರಕರಣ ದಾಖಲಿಸಿಕೊಂಡಿದ್ದ ಅಂಕೋಲಾ ಪೊಲೀಸರಿಂದ ಯಶಸ್ವೀ ಕಾರ್ಯಾಚರಣೆ

ಹುಬ್ಬಳ್ಳಿ ಮತ್ತು ಉತ್ತರ ಪ್ರದೇಶ ಮೂಲದ ಇಬ್ಬರು ಆರೋಪಿತರು ಅರೆಸ್ಟ್.

ಅಂಕೋಲಾ: ಪಟ್ಟಣದ ಕಾರವಾರ ರಸ್ತೆಗೆ ಹೊಂದಿಕೊಂಡಿರುವ ಕಣಕಣೇಶ್ವರ ದೇವಸ್ಥಾನ ಪಕ್ಕದ ಎಟಿಎಂನಲ್ಲಿ ನಿವೃತ್ತ ನೌಕರರೋರ್ವರ ಎಟಿಎಂ ಕಾರ್ಡ್ ಬದಲಾಯಿಸಿ ರೂ 13ಸಾವಿರ ವಂಚಿಸಿರುವುದು ಇತ್ತೀಚೆಗೆ ನಡೆದಿದ್ದು, ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಬೆನ್ನು ಹತ್ತಿದ್ದ ಅಂಕೋಲಾ ಪೊಲೀಸರು,ಹಿರಿಯ ಅಧಿಕಾರಿಗಳ ನಿರ್ದೇಶನ ಮತ್ತು ಮಾರ್ಗದರ್ಶನದಂತೆ ಯಶಸ್ವೀ ಕಾರ್ಯಾಚರಣೆ ನಡೆಸಿದ್ದು,ಹುಬ್ಬಳ್ಳಿ ಮೂಲದ ಓರ್ವ ಹಾಗೂ ಉತ್ತರ ಪ್ರದೇಶ ಮೂಲದ ಇನ್ನೋರ್ವ ಸೇರಿ ,ಒಟ್ಟು 2 ಆರೋಪಿತರನ್ನು ವಶಕ್ಕೆ ಪಡೆದು,ಕಾನೂನು ಕ್ರಮ ಮುಂದುವರಿಸಿದ್ದಾರೆ.

ಅಂದು ನಡೆದಿದ್ದೇನು?: ತಾಲೂಕಿನ ಹುಲಿದೇವರವಾಡ ನಿವಾಸಿ, ಕೆಇಬಿ ನಿವೃತ್ತ ನೌಕರ ದೇವಿದಾಸ ಕೃಷ್ಣ ಮುಲಿಮಾಳಿ ನಾಯರ್ (69), ಅವರು ಅಗಸ್ಟ 1 ರಂದು ಮಧ್ಯಾಹ್ನ 1.30 ರ ಸುಮಾರಿಗೆ ಅಂಕೋಲಾ ಪಟ್ಟಣದ ಕಾರವಾರ ರಸ್ತೆಯಲ್ಲಿರುವ ಕಣಕಣೇಶ್ವರ ದೇವಸ್ಥಾನದ ಎಸ್‌ಬಿಐ ಬ್ಯಾಂಕ್ ಎಟಿಎಂ ಸೆಂಟರ್ ನಲ್ಲಿ ಹೋಗಿ, ತಮ್ಮ ಪೆನ್ಶನ್ ಖಾತೆಗೆ ಸಂಬಂಧಿಸಿದ ಬೇರೊಂದು ಬ್ಯಾಂಕಿನ ಎಟಿಮ್ ಕಾರ್ಡ್ ಹಾಕಿ ಹಣವನ್ನು ತೆಗೆಯಲು ಹೋದಾಗ,ಆ ಎಟಿಎಂ ಮಷೀನ್ ನಲ್ಲಿ ಹಣವಿಲ್ಲ ಎಂದು ತೋರಿಸಿದ್ದರಿಂದ, ಅವರು ಅಲ್ಲೇ ಪಕ್ಕದಲ್ಲಿರುವ ಎಕ್ಸಿಸ್ ಬ್ಯಾಂಕ್ ಎಟಿಎಂ ಗೆ ಹೋಗಿ,ಅಲ್ಲಿದ್ದವರ ಬಳಿ ಹಣವಿದೆಯೇ ಎಂದು ವಿಚಾರಿಸಿದ್ದಾರೆ.

ಈ ವೇಳೆ ಯಾರೋ ಆರೋಪಿತರು ಮೊದಲೇ ಹೊಂಚು ಹಾಕಿಕೊಂಡಂತಿದ್ದು ,ದೇವಿದಾಸ ನಾಯರ್ ಅವರಿಗೆ ಅರಿವಿಗೆ ಬಾರದಂತೆ, ಅವರ ಕಾರ್ಡ್ ಬದಲಾಯಿಸಿ ( ಅಂತಹುದೇ ಇನ್ನೊಂದು ಕಾರ್ಡ್ ಇಟ್ಟು ), ನಂತರ ನಿವೃತ್ತ ನೌಕರನ ಕಾರ್ಡ್ ಬಳಸಿ ಅವರ ಖಾತೆಯಲ್ಲಿದ್ದ ಒಟ್ಟೂ ರೂ 13000 ಸಾವಿರ ಹಣವನ್ನು ತೆಗೆದು ಮೋಸ ಮಾಡಿದ್ದರು. ನಂತರ ತಾನು ಮೋಸ ಹೋಗಿರುವುದು ಗಮನಕ್ಕೆ ಬರುತ್ತಲೇ,ಕೆಇಬಿ ನಿವೃತ್ತ ನೌಕರ ಅಂಕೋಲಾ ಪೊಲೀಸರಿಗೆ ದೂರು ನೀಡಿ,ವಂಚಕರನ್ನು ಪತ್ತೆ ಹಚ್ಚಿ,ತನ್ನ ಹಣ ಮರಳಿಸಿ ಕೊಡಬೇಕೆಂದು ವಿನಂತಿಸಿಕೊಂಡಿದ್ದರು.

ನಿವೃತ್ತ ನೌಕರನ ಪೆನ್ಷನ್ ಹಣ ಪ್ರತಿ ತಿಂಗಳು ಜೀವನಾಧಾರಕ್ಕೆ ಬಳಕೆಯಾಗುತ್ತಿತ್ತು.ಅಲ್ಲದೇ ಕಳೆದ ಕೆಲವು ತಿಂಗಳ ಹಿಂದೆ ಅವರ ಪತ್ನಿ ಅನಾರೋಗ್ಯದಿಂದ ಅಕಾಲಿಕ ನಿಧನ ಹೊಂದಿದ್ದು,ಮೊದಲೇ ನೊಂದಿದ್ದ ಇಂಥವರಿಗೆ ಮೋಸ ಮಾಡಿದವರಾರು?. ಅಂದು ಕಷ್ಟ ಪಟ್ಟು ದುಡಿದು,ವೃದ್ದಾಪ್ಯ ಕಾಲದಲ್ಲಿ ಪೆನ್ಷನ್ ರೂಪದಲ್ಲಿ ನೆರವಾಗಬೇಕಿದ್ದ ಹಣ ವಂಚಕರ ಪಾಲಾಗಿದ್ದಕ್ಕೆ ಹಲವರು ಬೇಸರ ವ್ಯಕ್ತಪಡಿಸಿ,ವಂಚಕರು ಸೆರೆಯಾಗುವ ಮೂಲಕ,ನಿವೃತ್ತ ನೌಕರನ ಹಣ ಮರಳಿ ಸಿಗಲಿ ಮತ್ತು ನೊಂದು ಕೊಂಡಿದ್ದ ಅವರ ಮನಸ್ಸಿಗೆ ನೆಮ್ಮದಿ ತರಲಿ ಎಂಬಿದ್ದರು.

ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾದ ಬಳಿಕ ಪ್ರಕರಣದ ಬೆನ್ನು ಹತ್ತಿದ್ದ ಅಂಕೋಲಾ ಪೊಲೀಸರು,ಆರೋಪಿತರನ್ನು ಬಂಧಿಸಿ ಅವರ ಬಳಿ ಇದ್ದ ರೂ 9500 ಹಾಗೂ 3 ವಿವಿಧ ಬ್ಯಾಂಕ್ ಗಳ ಎಟಿಎಂ ಕಾರ್ಡ್ ಗಳನ್ನು ವಶಪಡಿಸಿಕೊಂಡು ,ತನಿಖೆ ಮುಂದುವರಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಎಮ್. ನಾರಾಯಣ ಮಾನ್ಯ ಪೊಲೀಸ್ ಅಧೀಕ್ಷಕರು ಉತ್ತರ ಕನ್ನಡ ಜಿಲ್ಲೆ ಕಾರವಾರ ರವರ ನಿರ್ದೇಶನದಂತೆ, ಸಿ.ಟಿ, ಜಯಕುಮಾರ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಮತ್ತು ಎಮ್.ಜಗದೀಶ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ಉತ್ತರ ಕನ್ನಡ ಜಿಲ್ಲೆ ಕಾರವಾರ ರವರ ಮಾರ್ಗದರ್ಶನದಂತೆ ಗಿರೀಶ ಎಸ್.ವಿ. ಮಾನ್ಯ ಪೊಲೀಸ್ ಉಪಾಧೀಕ್ಷಕರು ಕಾರವಾರ ಉಪವಿಭಾಗ ಕಾರವಾರ ರವರ ನೇತೃತ್ವದಲ್ಲಿ ಹಾಗೂ ಅಂಕೋಲಾ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀಕಾಂತ ತೋಟಗಿ ರವರ ಮಾರ್ಗದರ್ಶನದಲ್ಲಿ ತನಿಖಾಧಿಕಾರಿಯಾದ ಜಯಶ್ರೀ ಪ್ರಭಾಕರ (ತನಿಖೆ-1) , ಸುಹಾಸ್ ಆರ್. ಪಿಎಸ್‌ಐ(ತನಿಖೆ-2), ಉದ್ದಪ್ಪ ಧರೇಪ್ಪನವರ(ಕಾ.ಸೂ) ಮತ್ತು ಸಿಬ್ಬಂದಿಗಳಾದ ಸಿ.ಹೆಚ್.ಸಿ ಪ್ರಶಾಂತ ನಾಯ್ಕ, ಸಿಪಿಸಿಗಳಾದ ಆಸೀಪ್ ಆರ್.ಕೆ.,ಮನೋಜ ಡಿ, ,ರೋಹಿದಾಸ ದೇವಾಡಿಗ , ಶ್ರೀಕಾಂತ ಕಟಬರ ,ಗುರುರಾಜ ನಾಯ್ಕ ,ಅರುಣ ಮೇತ್ರಿ ಇವರುಗಳ ತಂಡ ಆರೋಪಿತರ ಬಗ್ಗೆ ಮಾಹಿತಿ ಸಂಗ್ರಹಿಸಿ ದಿನಾಂಕ: 13-08-
2024 ರಂದು ಆರೋಪಿತರಾದ 1)ಅಷ್ಟಾಕ್ ತಂದೆ ರಬ್ಬಾನಿ ತಳವಾಯಿ, ಸಾ|ಎಸ್.ಎಮ್ ಕೃಷ್ಣ ನಗರ, ಹಳಿ ಹುಬ್ಬಳ್ಳಿ, ಹುಬ್ಬಳ್ಳಿ 2)ಅನೀಲ ಸಿಂಗ್ ತಂದೆ ಓಂ ಪ್ರಕಾಶ ಸಿಂಗ್.ಸಾಡೆಹ್ರಾನ್, ಪೋಸ್ಟ: ಡೆಹ್ರಾನ್, ಹಲ್ಲೆ: ಪ್ರತಾಪಗಡ, ರಾಜ್ಯ: ಉತ್ತರ ಪ್ರದೇಶ. ಇವರನ್ನು ವಶಕ್ಕೆ ಪಡೆದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತರಿಂದ ರೂ 9500/- ಗಳನ್ನು ಹಾಗೂ 03 ವಿವಿಧ ಬ್ಯಾಂಕ್ ಗಳ ಎಟಿಎಮ್ ಕಾರ್ಡ್ ಗಳನ್ನು ಮ ವಶಪಡಿಸಿಕೊಂಡಿದ್ದಾರೆ. ಅಂಕೋಲಾ ಪೊಲೀಸರ ಈ ಯಶಸ್ಟೀ ಕಾರ್ಯಾಚರಣೆಗೆ ತಾಲೂಕಿನ ಸಾರ್ವಜನಿಕ ವಲಯದಿಂದ ಮೆಚ್ಚುಗೆಯ ಮಾತುಗಳು ಕೇಳಿಬಂದಿವೆ.

ಅಂಕೋಲಾ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಗಳ ಈ ಪತ್ತೆ ಕಾರ್ಯವನ್ನು ಉತ್ತರ ಕನ್ನಡ ಜಿಲ್ಲೆಯ ಪೊಲೀಸ ವರಿಷ್ಠಾಧಿಕಾರಿಗಳು ಉತ್ತರ ಕನ್ನಡ ಜಿಲ್ಲೆ ಕಾರವಾರ ರವರು ಅಭಿನಂದಿಸಿ ಪ್ರಶಂಸನೆ ವ್ಯಕ್ತಪಡಿಸಿದ್ದಾರೆ. ಈ ಆರೋಪಿತರು ತಾಲೂಕು ಜಿಲ್ಲೆ ಹಾಗೂ ರಾಜ್ಯದ ಇತರಡೆಯೂ ಇಂತಹ ವಂಚನೆ ಕೃತ್ಯಗಳನ್ನು ನಡೆಸಿರಬಹುದೇ ಎಂದು ತನಿಕೆಯಿಂದ ತಿಳಿದು ಬರ ಬೇಕಿದೆ. ಅಪರಿಚಿತರನ್ನು ನಂಬದೇ,ಸಾರ್ವಜನಿಕರು ಸ್ವಯಂ ಜಾಗೃತಿ ವಹಿಸಿಕೊಳ್ಳಬೇಕು,ಒಂದೊಮ್ಮೆ ವಂಚನೆಯಾದರೆ 112 ಗೆ ಕರೆ ಮಾಡಿ,ಇಲ್ಲವೇ ತಮ್ಮ ಹತ್ತಿರದ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ,ಮಾಹಿತಿ ಇಲ್ಲವೆ ದೂರು ನೀಡುವಂತೆ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button