Focus NewsImportant
Trending

ಅಂಕೋಲಾ ಠಾಣೆಯ 3 PSI ಗಳ ವರ್ಗಾವಣೆ: ಇಬ್ಬರು ಹೊಸ ಅಧಿಕಾರಿಗಳು ಕರ್ತವ್ಯಕ್ಕೆ ಹಾಜರ್

ಅಂಕೋಲಾ : ರಾಜ್ಯದಲ್ಲಿ ನೂತನ ಸರ್ಕಾರ ರಚನೆಯೊಂದಿಗೆ ಅಧಿಕಾರಿಗಳ ವರ್ಗಾವಣೆ ಪರ್ವವೂ ಆರಂಭಗೊಂಡಿದ್ದು, ಅಂಕೋಲಾ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಒಟ್ಟೂ ನಾಲ್ವರು ಪಿ.ಎಸ್.ಐ ಗಳಲ್ಲಿ ಪ್ರವೀಣ್ ಕುಮಾರ್,ಮಹಾಂತೇಶ್ ಬಿ. ವಿ ಮತ್ತು ಪ್ರೇಮನಗೌಡ ಪಾಟೀಲ್  ವರ್ಗಾವಣೆ ಗೊಂಡಿದ್ದಾರೆ.   ಅಂಕೋಲಾ ಠಾಣೆಯ ನೂತನ ಪಿಎಸೈ ಆಗಿ ಉದ್ದಪ್ಪ ಅಶೋಕ ಧರೆಪ್ಪನವರ ಅವರು ಪ್ರವೀಣ ಕುಮಾರ ಅವರ ಸ್ಥಾನಕ್ಕೆ (ಕಾನೂನು ಮತ್ತು ಸುವ್ಯವಸ್ಥೆ ) ಹಾಗೂ ಜಯಶ್ರೀ ಪಿ ಅವರು ಮಹಾಂತೇಶ ಬಿ.ವಿ ಇವರ  ಸ್ಥಾನಕ್ಕೆ ವರ್ಗಾವಣೆ ಗೊಂಡು ಬಂದಿದ್ದು ದಿ. 17 – 06- 23 ರ  ಶನಿವಾರ  ಅಧಿಕಾರ ವಹಿಸಿಮಾಡಿದ್ದಾರೆ.

ಉದ್ದಪ್ಪ ಧರೆಪ್ಪನವರ ಹಾಗೂ ಜಯಶ್ರೀ ಪ್ರಭಾಕರ 2020 ರ ಬ್ಯಾಚ್ ನ ಯುವ ಅಧಿಕಾರಿಗಳಾಗಿದ್ದಾರೆ. ಉದ್ದಪ್ಪ ಧರೆಪ್ಪನವರ ಮೂಲತ ಬೆಳಗಾಂವಿ ಜಿಲ್ಲೆಯವರಾಗಿದ್ದು , ಕಾರವಾರ ತಾಲೂಕಿನ ಚಿತ್ತಾಕುಲ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಇದೀಗ ಅಂಕೋಲಾ ಠಾಣೆಗೆ ವರ್ಗಾವಣೆಗೊಂಡು ಅಧಿಕಾರ ವಹಿಸಿಕೊಂಡಿದ್ದಾರೆ.ಚಿತ್ತಾಕುಲದ ಕಾ. ಸು ಮತ್ತು ಸಂಚಾರ ವಿಭಾಗದ ಪಿ ಎ ಸೈ ಆಗಿ ಅಂಕೋಲಾದಿಂದ ವರ್ಗವಣೆಗೊಂಡ ಮಹಾಂತೇಶ ತನಿಖೆ 1 ) ಬಿ.ವಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ನೂತನ ಪಿ. ಎ ಸೈ ಆಗಿ ಅಂಕೋಲಾಕ್ಕೆ ಹಾಜರಾಗಿರುವ  ಜಯಶ್ರೀ ಪ್ರಭಾಕರ ಮೂಲತ ಬಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿಯವರಾಗಿದ್ದು ಈ ಹಿಂದೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಸೇವೆ ಸಲ್ಲಿಸಿದ್ದರು. ಪ್ರೇಮನಗೌಡ (ಸಂಚಾರ ) ಅವರ ಸ್ಥಾನಕ್ಕೆ ಅಂಕೋಲದಲ್ಲಿ ಈ ಹಿಂದೆ ಪ್ರೊಬೆಶನರಿ ಅಧಿಕಾರಿಯಾಗಿ, ನಂತರ  ಯಲ್ಲಾಪುರದಲ್ಲಿ (ತನಿಖೆ 1 ) ರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸುನೀಲ ಹುಲ್ಗೊಳ್ಳಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಇದೆ. ಇದೇ ವೇಳೆ ಸಿಪಿಐ ಅವರು ಸಹ ವರ್ಗಾವಣೆಗೊಂಡು, ಆ ಹುದ್ದೆಗೆ ಈ ಹಿಂದೆ ಇಲ್ಲಿಯೇ ಕರ್ತವ್ಯ ನಿರ್ವಹಿಸಿದ್ದ ಅಧಿಕಾರಿ ಓರ್ವರು ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆ ಕೇಳಿ ಬಂದಿದೆ.

ಈ ಕುರಿತು ಮುಂದಿನ ದಿನಗಳಲ್ಲಿ ಸ್ಪಷ್ಟ ಮಾಹಿತಿ ಲಭ್ಯವಾಗಬೇಕಿದೆ.ಚುನಾವಣೆ ನೀತಿ ಸಂಹಿತೆ ಅವಧಿ ಮುಕ್ತಾಯವಾದ ಬಳಿಕ ಈ ಹಿಂದಿನ ಕೆಲ ಅಧಿಕಾರಿಗಳು ಮೂಲಸ್ಥಾನದಲ್ಲಿ ಮುಂದುವರೆಯುವ, ಇತರೆ ಕೆಲ ಅಧಿಕಾರಿಗಳು ವರ್ಗಾವಣೆಗೊಳ್ಳುವ ಕುರಿತು ವಿಸ್ಮಯ ವಾಹಿನಿ ವಿಶೇಷ ವರದಿ ಪ್ರಕಟಿಸಿದ್ದನ್ನು ಸ್ಮರಿಸಬಹುದಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button