Follow Us On

WhatsApp Group
Focus News
Trending

ಅಂಕೋಲಾ ವಿವಿಧ ತಾಲೂಕು ವ್ಯಾಪ್ತಿಯ  ಗ್ರಾಮ ಪಂಚಾಯತ್ ಗಳ ಅಧ್ಯಕ್ಷ – ಉಪಾಧ್ಯಕ್ಷರ ಮೀಸಲಾತಿ ಪ್ರಕ್ರಿಯೆ

ಅಂಕೋಲಾ: ಜಿಲ್ಲೆಯ ವಿವಿಧ ತಾಲೂಕು ವ್ಯಾಪ್ತಿಯ  ಗ್ರಾಮ ಪಂಚಾಯತ್ ಗಳ ಎರಡನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ಪ್ರಕ್ರಿಯೆ ಜೋರಾಗಿ ನಡೆಯುತ್ತಿದ್ದು, ಜೂನ್ 17 ರಂದು ಪಟ್ಟಣದ ಸತ್ಯಾಗ್ರಹ ಸ್ಮಾರಕ ಭವನದಲ್ಲಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಾಳಿಕಟ್ಟಿ ಅವರ ಅಧ್ಯಕ್ಷತೆಯಲ್ಲಿ ಅಂಕೋಲಾ ತಾಲೂಕಿನ 21 ಗ್ರಾಮ ಪಂಚಾಯಿತಿಗಳ ಮೀಸಲಾತಿ ಪ್ರಕಟಿಸಲಾಯಿತು.

ಸುಂಕಸಾಳ  ಅಧ್ಯಕ್ಷ ಸ್ಥಾನ (ಸಾಮಾನ್ಯ ಮಹಿಳೆ), ಉಪಾಧ್ಯಕ್ಷ (ಹಿಂದುಳಿದ ವರ್ಗ ಅ),

ಡೋಂಗ್ರಿ ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಹಿಂದುಳಿದ ಅ ಮಹಿಳೆ) ,

ಅಚವೆ  ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಹಿಂದುಳಿದ ಅ ಮಹಿಳೆ) 

ಹಿಲ್ಲೂರು  ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ)

ಅಗಸೂರು  ಅಧ್ಯಕ್ಷ (ಸಾಮಾನ್ಯ ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ), 

ಮೊಗಟಾ ಅಧ್ಯಕ್ಷ (ಸಾಮಾನ್ಯ ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ), 

ಬೆಳಸೆ ಅಧ್ಯಕ್ಷ  (ಹಿಂದುಳಿದ ಬ ಮಹಿಳೆ), ಉಪಾಧ್ಯಕ್ಷ (ಹಿಂದುಳಿದ ಅ)

ಸಗಡಗೇರಿ  ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಹಿಂದುಳಿದ ಬ ಮಹಿಳೆ), 

ಅಗ್ರಗೋಣ  ಅಧ್ಯಕ್ಷ (ಸಾಮಾನ್ಯ ಮಹಿಳೆ),ಉಪಾಧ್ಯಕ್ಷ (ಸಾಮಾನ್ಯ)

ಶೆಟಗೇರಿ  ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಸಾಮಾನ್ಯ ಮಹಿಳೆ) 

ಬೆಳಂಬಾರ  ಅಧ್ಯಕ್ಷ (ಹಿಂದುಳಿದ ಅ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ) 

ವಂದಿಗೆ  ಅಧ್ಯಕ್ಷ (ಹಿಂದುಳಿದ ಅ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), 

ಬೊಬ್ರವಾಡ ಅಧ್ಯಕ್ಷ (ಹಿಂದುಳಿದ ಅ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ),

ಅಲಗೇರಿ  ಅಧ್ಯಕ್ಷ (ಹಿಂದುಳಿದ ಅ), ಉಪಾಧ್ಯಕ್ಷ (ಸಾಮಾನ್ಯ ಮಹಿಳೆ),  

ಭಾವಿಕೇರಿ  ಅಧ್ಯಕ್ಷ (ಹಿಂದುಳಿದ ಅ ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), 

ಬೆಲೇಕೇರಿ ಅಧ್ಯಕ್ಷ  (ಹಿಂದುಳಿದ ಅ ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ), 

ಹಟ್ಟಿಕೇರಿ  ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), 

ಅವರ್ಸಾ ಅಧ್ಯಕ್ಷ (ಪರಿಶಿಷ್ಟ ಜಾತಿ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ), 

ಹಾರವಾಡ ( ಸಾಮಾನ್ಯ ಮಹಿಳೆ), ಉಪಾಧ್ಯಕ್ಷ (ಹಿಂದುಳಿದ ಅ) , 

ವಾಸರಕುದ್ರಿಗೆ ಅಧ್ಯಕ್ಷ  (ಸಾಮಾನ್ಯ), ಉಪಾಧ್ಯಕ್ಷ (ಹಿಂದುಳಿದ ಅ ಮಹಿಳೆ), ಹೊನ್ನೇಬೈಲ ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಪರಿಶಿಷ್ಟ ಮಹಿಳೆ) ಮೀಸಲಾತಿ ಪ್ರಕಟಗೊಂಡಿದೆ. ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ, ಸಹಾಯಕ ಆಯುಕ್ತ ರಾಘವೇಂದ್ರ ಜಗಳಾಸರ, ತಹಶೀಲ್ಧಾರ ಪ್ರವೀಣ ಹುಚ್ಚಣ್ಣನವರ್, ತಾ.ಪಂ ಕಾರ್ಯನಿರ್ವಹಣ ಅಧಿಕಾರಿ ಪಿ ವೈ ಸಾವಂತ್ ಮೊದಲಾದವರು ಉಪಸ್ಥಿತರಿದ್ದರು.ಹೊಸ ಮೀಸಲಾತಿಯಿಂದ ಈ ಹಿಂದಿನ ಹಲವು ಅಧ್ಯಕ್ಷರು ಮತ್ತು ಉಪಾಧ್ಯಕ್ಷರರಿಗೆ ಎರಡನೇ ಬಾರಿ ಸ್ಪರ್ಧಿಸುವ  ಅವಕಾಶ ತಪ್ಪಿ ಹೋದರೆ, ಕೆಲವರಿಗೆ ಮತ್ತೊಮ್ಮೆ ಅದೃಷ್ಟ ಪರೀಕ್ಷಿಸುವ ಅವಕಾಶ ಲಭ್ಯವಾದಂತಾಗಿದೆ. ಇನ್ನು 1-2 ಕಡೆ    ಎದುರಾಳಿಗಳಿಗೆ ಅವಕಾಶವಿಲ್ಲದಂತೆ ಮೀಸಲಾತಿ ವರವಾಗಿ ಪರಿಣಮಿಸಿದ ಎನ್ನಲಾಗಿದೆ.

ಗ್ರಾಪಂ ಚುನಾವಣೆಗೆ ಯಾವುದೇ ಅಭ್ಯರ್ಥಿಗಳು ನೇರವಾಗಿ ಪಕ್ಷದ ಚಿಹ್ನೆಯಡಿ ಸ್ಪರ್ಧಿಸದಿದ್ದರೂ ಸಹ  ಈ ಹಿಂದೆ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದು,ಈಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿರುವುದರಿಂದ ,ಪಕ್ಷ ಬೆಂಬಲಿತ ಯಾವೆಲ್ಲ ಅಭ್ಯರ್ಥಿಗಳು ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ ಎಂದು  ಕಾದು ನೋಡಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button