ImportantJob News
Trending

KEA Recruitment 2023: ಭರ್ಜರಿ ಉದ್ಯೋಗಾವಕಾಶ: 670 ಹುದ್ದೆಗಳಿಗೆ ನೇಮಕಾತಿ: ಇಂದೇ ಅರ್ಜಿ ಸಲ್ಲಿಸಿ

ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗಾಗಿ ಶುಭಸುದ್ದಿ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ನೇಮಕಾತಿ ನಡೆಸುತ್ತಿದ್ದು, ಬೆಂಗಳೂರಿನ ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್,ಕರ್ನಾಟಕ ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ 186, ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತದ 386, ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮದ 26 ಸೇರಿ ಒಟ್ಟು 670 ಹುದ್ದೆಗಳಿಗೆ ನೇಮಕ ಪ್ರಕ್ರಿಯೆ ನಡೆಯಲಿದೆ. ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಜುಲೈ 22 ಕೊನೆಯ ದಿನವಾಗಿದೆ.

MSIL Recruitment 2023: 72 ಹುದ್ದೆಗಳಿಗೆ ನೇಮಕಾತಿ

ಅಕೌಂಟ್ ಕ್ಲರ್ಕ್, ಮಾರಾಟ ಪ್ರತಿನಿಧಿಗಳು, ಕ್ಲರ್ಕ್, ಸಹಾಯಕ ವ್ಯವಸ್ಥಾಪಕರು, ಹೀಗೆ ಇಟ್ಟು 670 ಹುದ್ದೆಗಳು ಖಾಲಿಯಿವೆ. ಕ್ಲರ್ಕ್ ಹುದ್ದೆಗಳಿಗೆ ಯಾವುದೇ ಪಧವೀಧರರು ಅರ್ಜಿ ಸಲ್ಲಿಸಬಹುದು. ಮಾರಾಟ ಪ್ರತಿನಿಧಿಗಳಿಗೆ ಐದು ವರ್ಷದ ಅನುಭವ ಕಡ್ಡಾಯ ಮಾಡಲಾಗಿದೆ. ಕೆಲ ಹುದ್ದೆಗಳಿಗೆ ಪಧವೀಧರರು ಕೂಡಾ ಅರ್ಜಿಯನ್ನು ಸಲ್ಲಿಸಬಹುದು. ಈ ಕೆಳಗಡೆ ನೋಟೀಫಿಕೇಷನ್ ಲಿಂಕ್ ಮತ್ತು ಸಂಬAಧಪಟ್ಟ ಅಧಿಕೃತ ವೆಬ್‌ಸೈಟ್ ನ ಲಿಂಕ್ ನೀಡಲಾಗಿದ್ದು, ಅಲ್ಲಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾಗಿದೆ.

ಅರ್ಜಿ ಸಲ್ಲಿಸುವ ವಿಧಾನ: ಪ್ರಾಧಿಕಾರದ ವೆಬ್‌ಸೈಟ್ https://cetonline.karnataka.gov.in/kea/ ನಲ್ಲಿ ತೋರಿಸುವ ಲಿಂಕ್ ಅನ್ನು ಆಯ್ಕೆ ಮಾಡಿ ಆನ್ ಲೈನ್ ಮುಖಾಂತರ ಅರ್ಜಿಯನ್ನು ಭರ್ತಿ ಮಾಡಬೇಕು. ಅಭ್ಯರ್ಥಿಗಳು ಒಂದಕ್ಕಿoತ ಹೆಚ್ಚಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸಿದ್ದಲ್ಲಿ, ಪ್ರತ್ಯೇಕ ಅರ್ಜಿ ಸಲ್ಲಿಸಬೇಕು ಹಾಗೂ ಅಂತಹ ಅಭ್ಯರ್ಥಿಗಳು ಪ್ರತಿ ಹುದ್ದೆಗೆ ಪ್ರತ್ಯೇಕವಾಗಿ ಶುಲ್ಕವನ್ನು ಪಾವತಿಸಬೇಕು

ಒಟ್ಟು ಹುದ್ದೆಗಳು670
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ22- 07- 2023
ನೋಟೀಫಿಕೇಷನ್ ಓದಲುಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸುವ ಲಿಂಕ್ಇಲ್ಲಿ ಕ್ಲಿಕ್ ಮಾಡಿ

ಇನ್ನು ಹೆಚ್ಚಿನ ಉದ್ಯೋಗಾವಕಾಶದ ಕುರಿತು ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button