ಭಟ್ಕಳ: ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಬೈಲೂರಿನ ರೇಲ್ವೇ ಹಳಿ ಬಳಿ ನಡೆದಿದೆ. ಗಾಯಗೊಂಡ ಲಾರಿ ಚಾಲಕನನ್ನು ಕ್ರೀಪಾಲ್ ಸಿಂಗ್ (30) ವಡಾಲ ಗುಜರಾತ ಎಂದು ಗುರುತಿಸಲಾಗಿದೆ.
ಈತ ಕೊಂಕಣ ರೇಲ್ವೆಯ ರೋರೋ ರೈಲಿನಲ್ಲಿ ಸರಕು ತುಂಬಿದ ಲಾರಿ ಚಾಲಕನಾಗಿದ್ದು, ಗುಜರಾತಿನಿಂದ ಸುರತ್ಕಲ್ ಗೆ ಹೋಗುತ್ತಿದ್ದಾಗ ಆಕಸ್ಮಿಕವಾಗಿ ರೈಲಿನಿಂದ ನೆಲಕ್ಕುರುಳಿ ಬಿದ್ದಿದ್ದಾನೆ.
ಇದರ ಪರಿಣಾಮ ಈತನ ತಲೆಗೆ ಗಂಭೀರ ಗಾಯವಾಗಿದ್ದು, ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುರುಡೇಶ್ವರ ಪಿ.ಎಸ್.ಐ. ಸಿ.ಆರ್. ಪುಟ್ಟಸ್ವಾಮಿ ಘಟನಾ ಸ್ಥಳಕ್ಕೆ ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ