Important

ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡಿದ ಉಡ

ಕಾಡು ಪ್ರಾಣಿ ಹಿಡಿಯಲು ಅರಣ್ಯ ಇಲಾಖೆಯ ಕಾರ್ಯಾಚರಣೆ ಹೇಗಿತ್ತು ನೋಡಿ
ಕೆಲ ಸಮಯ ಟ್ರಾಫಿಕ್ ಜಾಮ್!

ಭಟ್ಕಳ: ತಾಲೂಕಾ ಪಂಚಾಯತ್ ಎದುರಿನ ರಾಷ್ಟ್ರೀಯ ಹೆದ್ದಾರಿಯ ಪಕ್ಕದ ಚರಂಡಿಯಯಲ್ಲಿ ಕಾಡು ಉಡಾ ಪ್ರತ್ಯಕ್ಷಗೊಂಡ ಘಟನೆ ನಡೆದಿದೆ. ಇಲ್ಲಿನ ಅಂಜುಮಾನ್ ಗುಡ್ಡದ ಅರಣ್ಯ ಪ್ರದೇಶದಿಂದ ನಾಡಿಗೆ ಬಂದ ಕಾಡು ಉಡಾವೊಂದು ಬಾರಿ ವಾಹನ ದಟ್ಟಣೆ ಇರುವ ಕಾರಣ ರಸ್ತೆ ಕ್ರಾಸ್ ಮಾಡಲು ಆಗದೆ, ನಗರದ ಹೃದಯ ಭಾಗದ ರಾಷ್ಟ್ರೀಯ ಹೆದ್ದಾರಿಯ ಚರಂಡಿಯಲ್ಲಿ ಇತ್ತು.

ಇದನ್ನು ಗಮನಿಸಿದ ಸಾರ್ವಜನಿಕರೊಬ್ಬರು ಸಂಜೆ ವೇಳೆ ಸಂಬoಧಪಟ್ಟ ಅರಣ್ಯ ಇಲಾಖೆ ಸಿಬ್ಬಂದಿಗೆ ತಿಳಿಸಿದ್ದಾರೆ, ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿಗಳು ಕಾಡು ಉಡವನ್ನು ಸೆರೆ ಹಿಡಿದು ಕಾಡಿಗೆ ಬಿಟ್ಟು ಬಂದಿದ್ದಾರೆ. ಕಾರ್ಯಾಚರಣೆ ನಡೆಯುವ ವೇಳೆ ಕೆಲ ಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಆಗಿತ್ತು.
ಈ ಕುರಿತ ವಿಡಿಯೋ ಇಲ್ಲಿದೆ ನೋಡಿ.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Back to top button